ರೂಪವತಿಯರಾದ ಹಿರಿಯ ಕ್ರಿಕೆಟಿಗರು..!

harbhajan singh_web
Published on

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿರುವ ಭಾರತೀಯ ಕ್ರಿಕೆಟಿಗರು ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಮೊನ್ನೆಯಷ್ಟೇ ಕೆಲ ಸ್ಟಾರ್ ಕ್ರಿಕೆಟಿಗರನ್ನು ಫೇಸ್ ಆ್ಯಪ್ ಮೂಲಕ ಹೆಣ್ಣಾಗಿ ಪರಿವರ್ತಿಸಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ತಮ್ಮ ಸಹಪಾಠಿಗಳಾದ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಅವರುಗಳನ್ನು ಹೆಣ್ಣಾಗಿ ಪರಿವರ್ತಿಸಿದ್ದಾರೆ.

ಯಜುವೇಂದ್ರ ಚಾಹಲ್, ರೋಹಿತ್ ಶರ್ಮ, ಕೆಎಲ್ ರಾಹುಲ್ ಹೆಣ್ಣಾಗಿ ಪರಿವರ್ತನೆಯಾಗಿದ್ದರೆ ಹೇಗೆ ಕಾಣುತ್ತಿದ್ದರೂ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಇದೀಗ ದಿಗ್ಗಜರ ಸರದಿ. ಅದರಲ್ಲೂ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಫೋಟೋ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಗಮನಸೆಳೆದಿದೆ. ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಪ್ರಕಟಿಸಿದ ಫೋಟೋಗೆ ಪ್ರತಿಯಾಗಿ ಹರ್ಭಜನ್ ಸಿಂಗ್ ಈ ಫೋಟೋ ಪ್ರಕಟಿಸಿದ್ದಾರೆ.ನಿಮ್ಮ ಗರ್ಲ್ ಫ್ರೆಂಡ್ ಆಯ್ಕೆ ಮಾಡಿಕೊಳ್ಳಿ ಎಂದು ಯುವರಾಜ್ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಹರ್ಭಜನ್ ಸಿಂಗ್, ನಿಮಗೆ ಯಾರು ಬೇಕು ಎಂದು ಹಿರಿಯ ಕ್ರಿಕೆಟಿಗ ಫೋಟೋ ಹಾಕಿದ್ದಾರೆ. ಜತೆಗೆ ಹಾಲಿ ಆಟಗಾರರಿಗಿಂತಲೂ ಇವರೇ ಸ್ಮಾರ್ಟ್​ ಎನ್ನುವ ಲೆಕ್ಕಾಚಾರದಲ್ಲಿ ಬಜ್ಜಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಹರ್ಭಜನ್ ಸಿಂಗ್, ಭಾನುವಾರವಷ್ಟೇ ಅಂತಾರಾಷ್ಟ್ರೀಯ ಯೋಗ ದಿನಾಚರಣ ಅಂಗವಾಗಿ ಕುಟುಂಬ ಸದಸ್ಯರೊಂದಿಗೆ ಯೋಗ ಮಾಡುತ್ತಿರುವ ಚಿತ್ರಪ್ರಕಟಿಸಿದ್ದರು. ಜತೆಗೆ ಅದೇ ದಿನ ಅಪ್ಪಂದಿರ ದಿನಾಚರಣೆ ಅಂಗವಾಗಿ ತಮ್ಮ ಮಗಳು ಬಿಡಿಸಿದ್ದ ಚಿತ್ರವನ್ನು ಪ್ರಕಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net