VIDEO| 40 ಅಡಿ ಎತ್ತರದ ಗೋಡೆಯಲ್ಲಿ ಪಿವಿ ಸಿಂಧು ಚಿತ್ರ, ಅಭಿಮಾನಿಗಳು ಫಿದಾ!

pv sindhu8
Published on

ಬೆಂಗಳೂರು: ಒಲಿಂಪಿಕ್ಸ್ ಇತಿಹಾಸದಲ್ಲಿ ರಜತ ಪದಕ ಜಯಿಸಿದ ಮೊದಲ ಭಾರತೀಯ ಮಹಿಳೆ ಎನಿಸಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರ ಬೃಹತ್ ಚಿತ್ರವನ್ನು 40 ಅಡಿ ಎತ್ತರದ ಗೋಡೆಯ ಮೇಲೆ ರಚಿಸಲಾಗಿದೆ. ತೆಲಂಗಾಣದ ಖಮ್ಮಂ ನಗರದ ಸರ್ದಾರ್ ಪಟೇಲ್ ಕ್ರೀಡಾಂಗಣದ ಹೊರಾಂಗಣ ಗೋಡೆಯಲ್ಲಿ ರಚಿಸಿರುವ ಈ ಚಿತ್ರಕ್ಕೆ ಸ್ವತಃ ಪಿವಿ ಸಿಂಧು ಮತ್ತು ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

‘40 ಅಡಿ ಎತ್ತರದ ಗೋಡೆ ಬರೆದಿರುವ ಈ ಚಿತ್ರ ಸಾಕಷ್ಟು ಸುಂದರವಾಗಿದೆ. ನಾನಿದನ್ನು ಇಷ್ಟ ಪಟ್ಟಿದ್ದೇನೆ ಮತ್ತು ಕಲಾವಿದರಾದ ವಿಜಯ್, ಸ್ವಾತಿ ಅವರಿಗೆ ಧನ್ಯವಾದಗಳು’ ಎಂದು ಪಿವಿ ಸಿಂಧು ಮಂಗಳವಾರ ಟ್ವೀಟಿಸಿದ್ದಾರೆ. ಜತೆಗೆ ಗೋಡೆಯ ಮೇಲೆ ರಚಿಸಲಾಗಿರುವ ತಮ್ಮ ಚಿತ್ರವನ್ನು ಟ್ವೀಟಿಸಿದ್ದಾರೆ ಮತ್ತು ಕಲಾವಿದರಾದ ವಿಜಯ್ ಮತ್ತು ಸ್ವಾತಿ ಅದನ್ನು ಬಿಡಿಸಲು ಪಟ್ಟಿರುವ ಸಾಹಸದ ವಿಡಿಯೋವನ್ನೂ ಪ್ರಕಟಿಸಿದ್ದಾರೆ.

ಪಿವಿ ಸಿಂಧು ಅವರ ಅಭಿಮಾನಿಗಳು ಕೂಡ ಈ ಬೃಹತ್ ಚಿತ್ರಕ್ಕೆ ಫಿದಾ ಆಗಿದ್ದು, ಅವರ ಈ ಟ್ವೀಟ್ ಸಾವಿರಾರು ಲೈಕ್ಸ್‌ಗಳನ್ನು ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net