More

    ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟದಿಂದ ‘ಮೇಡ್ ಇನ್ ಚೀನಾ’ ಸಲಕರಣೆಗಳಿಗೆ ಬಹಿಷ್ಕಾರ

    ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತದ 20 ಯೋಧರ ಬಲಿದಾನದ ಹಿನ್ನೆಲೆಯಲ್ಲಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ದೇಶದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೀಗ ಭಾರತೀಯ ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟ (ಐಡಬ್ಲ್ಯುಎಲ್‌ಎಫ್​) ಬೆಂಬಲ ನೀಡಿದ್ದು, ಚೀನಾದ ವೇಟ್‌ಲಿಫ್ಟಿಂಗ್ ಸಲಕರಣೆಗಳನ್ನು ಬಹಿಷ್ಕರಿಸಲು ಸೋಮವಾರ ನಿರ್ಧರಿಸಿದೆ.

    ‘ನಾವು ಚೀನಾ ಸಲಕರಣೆಗಳನ್ನು ಬಹಿಷ್ಕರಿಸಬೇಕು. ಚೀನಾದಲ್ಲಿ ತಯಾರಾದ ಯಾವುದೇ ಸಲಕರಣೆಗಳನ್ನು ಬಳಸದಿರಲು ನಾವು ನಿರ್ಧರಿಸಿದ್ದೇವೆ’ ಎಂದು ಐಡಬ್ಲ್ಯುಎಲ್‌ಎಫ್​ ಕಾರ್ಯದರ್ಶಿ ಸಹದೇವ್ ಯಾದವ್ ತಿಳಿಸಿದ್ದಾರೆ. ಐಡಬ್ಲ್ಯುಎಲ್‌ಎಫ್​ ಈ ನಿರ್ಧಾರವನ್ನು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೂ (ಸಾಯ್) ತಿಳಿಸಲಾಗಿದೆ.

    ಇದನ್ನೂ ಓದಿ: ಮೂರು ತಿಂಗಳ ಬಳಿಕ ಬ್ಯಾಟ್ ಹಿಡಿದ ಚೇತೇಶ್ವರ ಪೂಜಾರ

    ಚೀನಾದ ಕಂಪನಿ ‘ಝಡ್‌ಕೆಸಿ’ಯಿಂದ ಬಾರ್‌ಬೆಲ್ ಮತ್ತು ವೇಟ್ ಪ್ಲೇಟ್‌ಗಳಿಗೆ ಐಡಬ್ಲ್ಯುಎಲ್‌ಎಫ್​ ಕಳೆದ ವರ್ಷ ಆರ್ಡರ್ ನೀಡಿತ್ತು. ಆದರೆ ಚೀನಾದಿಂದ ಬಂದ ಈ ಸಲಕರಣೆಗಳು ದೋಷಪೂರಿತವಾಗಿದ್ದವು. ಹೀಗಾಗಿ ಅವುಗಳ ಬಳಕೆಯನ್ನು ಈಗಾಗಲೆ ನಿಲ್ಲಿಸಲಾಗಿದೆ. ಅಲ್ಲದೆ ಅವುಗಳನ್ನು ನಾಶಪಡಿಸಲಿದ್ದೇವೆ. ಭವಿಷ್ಯದಲ್ಲಿ ಎಂದೂ ಚೀನಾದ ಸಲಕರಣೆಗಳನ್ನು ಬಳಸುವುದಿಲ್ಲ. ಭಾರತ ಅಥವಾ ಇತರ ಯಾವುದಾದರು ದೇಶದಲ್ಲಿ ತಯಾರಾದ ಸಲಕರಣೆಗಳನ್ನು ಬಳಸುವೆವು ಎಂದು ಸಹದೇವ್ ಯಾದವ್ ತಿಳಿಸಿದ್ದಾರೆ.

    ಇದನ್ನೂ ಓದಿ: ಜೆರ್ಸಿಯಲ್ಲಿ ಭಾರತದ ವೈದ್ಯರ ಹೆಸರು, ಇಂಗ್ಲೆಂಡ್ ಕ್ರಿಕೆಟಿಗರಿಂದ ಗೌರವ

    ಚೀನಾ ಆ್ಯಪ್‌ಗಳನ್ನೂ ತೆಗೆದುಹಾಕಿದ ಲಿಫ್ಟರ್ಸ್​‌

    ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟದಿಂದ ‘ಮೇಡ್ ಇನ್ ಚೀನಾ’ ಸಲಕರಣೆಗಳಿಗೆ ಬಹಿಷ್ಕಾರ

    ಎಲ್ಲ ವೇಟ್‌ಲಿಫ್ಟರ್​‌ಗಳು ಚೀನಾ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವರೆಲ್ಲರೂ ಟಿಕ್‌ಟಾಕ್ ಮುಂತಾದ ಚೀನಾ ಆ್ಯಪ್‌ಗಳ ಬಳಕೆಯನ್ನು ನಿಲ್ಲಿಸಿದ್ದಾರೆ. ಆನ್‌ಲೈನ್‌ನಲ್ಲಿ ವಸ್ತುಗಳನ್ನು ಆರ್ಡರ್ ಮಾಡುವಾಗಲೂ ಅವು ಚೀನಾ ಉತ್ಪನ್ನಗಳೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ಈ ಮೊದಲು ಚೀನಾದ ಸಲಕರಣೆಗಳನ್ನು ತರಿಸಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಹದೇವ್, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚೀನಾದ ಸಲಕರಣೆಗಳನ್ನೇ ಬಳಸಲಾಗುತ್ತದೆ. ಹೀಗಾಗಿ ಅಂಥ ಸಲಕರಣೆಗಳಲ್ಲೇ ಅಭ್ಯಾಸ ಮಾಡುವ ಸಲುವಾಗಿ ಚೀನಾದ ಸಲಕರಣೆಗಳಿಗೆ ಆರ್ಡರ್ ನೀಡಲಾಗಿತ್ತು. ಲಾಕ್‌ಡೌನ್ ನಂತರ ಅವುಗಳನ್ನು ಬಳಸಲಾಗಿಲ್ಲ. ಸ್ವೀಡನ್‌ನಿಂದ ತರಿಸಿಕೊಳ್ಳಲಾಗಿರುವ ಸಲಕರಣೆಗಳನ್ನು ಈಗ ಬಳಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

    ಇದನ್ನೂ ಓದಿ: ಡಬ್ಲ್ಯುಡಬ್ಲ್ಯುಇ ದಿಗ್ಗಜ ಅಂಡರ್‌ಟೇಕರ್ ನಿವೃತ್ತಿ

    ಗಲ್ವಾನ್ ಕಣಿವೆಯಲ್ಲಿನ ಸಂಘರ್ಷದ ಬಳಿಕ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಕೂಗು ಭಾರತದಲ್ಲಿ ಹೆಚ್ಚಾಗುತ್ತಿದೆ. ಬಿಸಿಸಿಐ ಈಗಾಗಲೆ ಚೀನಾ ಕಂಪನಿಗಳ ಪ್ರಾಯೋಜಕತ್ವವನ್ನು ಮರುಪರಿಶೀಲಿಸಲು ಮುಂದಾಗಿದ್ದರೆ, ಭಾರತೀಯ ಒಲಿಂಪಿಕ್ಸ್ ಸಂಸ್ಥೆಯೂ ಚೀನಾ ವಸ್ತುಗಳು ಮತ್ತು ಪ್ರಾಯೋಜಕತ್ವ ಬಹಿಷ್ಕರಿಸಲು ಚಿಂತನೆ ನಡೆಸಿದೆ.

    ಫುಟ್‌ಬಾಲ್ ಪ್ರೇಮಿಗಳಿಗೆ ಸೆಕ್ಸ್ ಸಮಯದಲ್ಲೂ ಇವರದ್ದೇ ನೆನಪು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts