More

    ಡಬ್ಲ್ಯುಡಬ್ಲ್ಯುಇ ದಿಗ್ಗಜ ಅಂಡರ್‌ಟೇಕರ್ ನಿವೃತ್ತಿ

    ನ್ಯೂಯಾರ್ಕ್: ಕಳೆದ 33 ವರ್ಷಗಳಿಂದ ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್‌ನಲ್ಲಿ (ಡಬ್ಲ್ಯುಡಬ್ಲ್ಯುಇ) ಪ್ರಾಬಲ್ಯ ಸಾಧಿಸಿದ್ದ ದಿಗ್ಗಜ ಅಂಡರ್‌ಟೇಕರ್ ಭಾನುವಾರ ವಿದಾಯ ಪ್ರಕಟಿಸಿದ್ದಾರೆ. ಲಾಸ್ ರೈಡ್ ಡಾಕ್ಯುಸೆರೀಸ್‌ನ ಅಂತಿಮ ಎಪಿಸೋಡ್‌ನಲ್ಲಿ ಅವರು, ನಾನು ಇನ್ನೆಂದೂ ರೆಸ್ಲಿಂಗ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅವರ ನಿವೃತ್ತಿಯ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಕೊನೆಗೂ 55 ವರ್ಷದ ಅವರು ಅಧಿಕೃತವಾಗಿ ನಿವೃತ್ತಿ ೋಷಿಸಿದ್ದಾರೆ.

    ಇದನ್ನೂ ಓದಿ: ರಣಜಿ ಟ್ರೋಫಿ ಇತಿಹಾಸದ ಗರಿಷ್ಠ ವಿಕೆಟ್ ದಾಖಲೆ ವೀರ ರಾಜಿಂದರ್​ ಗೋಯೆಲ್​ ಇನ್ನಿಲ್ಲ

    ಅಮೆರಿಕದ ರೆಸ್ಲಿಂಗ್ ತಾರೆ ಅಂಡರ್‌ಟೇಕರ್ ನಿವೃತ್ತಿ ನಿರ್ಧಾರವನ್ನು ಟ್ವಿಟರ್‌ನಲ್ಲೂ ಸರಣಿ ಟ್ವೀಟ್‌ಗಳ ಮೂಲಕ ಪ್ರಕಟಿಸಿದ್ದಾರೆ. ಡಬ್ಲ್ಯುಡಬ್ಲ್ಯುಇ ರೆಸ್ಲರ್ ಆಗಿ ಕೋಟ್ಯಂತರ ಅಭಿಮಾನಿಗಳನ್ನು ಅಂಡರ್‌ಟೇಕರ್ ಸಂಪಾದಿಸಿದ್ದರು. ಡಬ್ಲ್ಯುಡಬ್ಲ್ಯುಇ ಬಗ್ಗೆ ಗೊತ್ತಿಲ್ಲದವರಿಗೂ ಅಂಡರ್‌ಟೇಕರ್ ಹೆಸರು ಗೊತ್ತಿತ್ತು. ಅವರ ನಿಜವಾದ ಹೆಸರು ಮಾರ್ಕ್ ಕ್ಯಾಲವೇ. ಡಬ್ಲ್ಯುಡಬ್ಲ್ಯುಇಯಲ್ಲಿ ಅವರು ಅಂಡರ್‌ಟೇಕರ್ ಎಂದೇ ಖ್ಯಾತರಾಗಿದ್ದರು. ಹಲವಾರು ಗಿಮಿಕ್‌ಗಳ ಮೂಲಕ ಗಮನಸೆಳೆದಿದ್ದರು. ಅದರಲ್ಲೂ ಅವರ ಹರಾರ್ ಟ್ಯಾಕ್ಟಿಕ್‌ಗಳು ಜನಪ್ರಿಯವಾಗಿದ್ದವು.

    ಡಬ್ಲ್ಯುಡಬ್ಲ್ಯುಇ ದಿಗ್ಗಜ ಅಂಡರ್‌ಟೇಕರ್ ನಿವೃತ್ತಿ

    ಇದನ್ನೂ ಓದಿ: ಸೆರೇನಾ ವಿಲಿಯಮ್ಸ್ ಮನೆಯಲ್ಲೇ ಟೆನಿಸ್ ಕೋರ್ಟ್ ನಿರ್ಮಾಣ!

    ಅಂಡರ್‌ಟೇಕರ್ ನಿವೃತ್ತಿಗೆ ಡಬ್ಲ್ಯುಡಬ್ಲ್ಯುಇ ಅಭಿಮಾನಿಗಳು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲಿ ‘ಥ್ಯಾಂಕ್ ಯೂ ಟೇಕರ್’ ಎಂಬ ಟ್ರೆಂಡಿಂಗ್ ಕೂಡ ವಿಶ್ವದಾದ್ಯಂತ ಶುರುವಾಗಿತ್ತು. ಭಾರತದಲ್ಲೂ ಅವರು ಮಕ್ಕಳಿಂದ ಮುದುಕರವರೆಗೆ ಅಭಿಮಾನಿಗಳನ್ನು ಹೊಂದಿದ್ದರು. 6.10 ಅಡಿ ಎತ್ತರದ ಅಂಡರ್‌ಟೇಕರ್ 1987ರಲ್ಲಿ ಡಬ್ಲ್ಯುಡಬ್ಲ್ಯುಇಗೆ ಪದಾರ್ಪಣೆ ಮಾಡಿದ್ದರು. ಅವರು 7 ಬಾರಿ ವಿಶ್ವ ಹೆವಿವೇಟ್ ಚಾಂಪಿಯನ್ ಆಗಿದ್ದರು. 4 ಬಾರಿ ಡಬ್ಲ್ಯುಡಬ್ಲ್ಯುಇ ಅಥವಾ ಡಬ್ಲ್ಯುಡಬ್ಲ್ಯುಎಫ್​ ಚಾಂಪಿಯನ್ ಆಗಿದ್ದರು.

    ದೇಶ ಕ್ರಿಕೆಟ್ ಆಡುವ ಸ್ಥಿತಿಯಲ್ಲಿಲ್ಲ; ದಿಗ್ಗಜ ರಾಹುಲ್ ದ್ರಾವಿಡ್ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts