More

    16 ಬಾರಿ ಡಬ್ಲ್ಯುಡಬ್ಲ್ಯುಇ ಚಾಂಪಿಯನ್​ಗೆ ಕ್ರಿಕೆಟ್​ ದಿಗ್ಗಜ ರಾಹುಲ್​ ದ್ರಾವಿಡ್​ ಮಾತೇ ಸ್ಫೂರ್ತಿ..

    ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​, ಅದೆಷ್ಟೋ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಇವರನ್ನು ಆದರ್ಶವಾಗಿ ಸ್ವೀಕರಿಸಿರುವ ಆಟಗಾರರಿಗೆ ಲೆಕ್ಕವಿಲ್ಲ. ವೃತ್ತಿಜೀವನಕ್ಕೆ ನಿವೃತ್ತಿ ಹೇಳಿ 9 ವರ್ಷಗಳ ಕಳೆದರೂ ದ್ರಾವಿಡ್​ ಅಭಿಮಾನಿಗಳ ಸಂಖ್ಯೆ ಮಾತ್ರ ಕುಂದಿಲ್ಲ. ಇದೀಗ ಕೋಚಿಂಗ್​ನತ್ತ ಗಮನಹರಿಸಿರುವ ದ್ರಾವಿಡ್​, ಯುವ ಕ್ರಿಕೆಟಿಗರಿಗೆ ತಮ್ಮ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ದ್ರಾವಿಡ್​ ಮಾತು ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ, ಇತರ ಕ್ರೀಡೆಯ ಕ್ರೀಡಾಪಟುಗಳು ಕೂಡ ಸ್ಫೂರ್ತಿಯಾಗಿ ಸ್ವೀಕರಿಸುತ್ತಾರೆ. ಅದೇ ರೀತಿ ವಲ್ಡ್​ ರೆಸ್ಲಿಂಗ್​ ಇಂಟರ್​ಟೈನ್ಮೆಂಟ್​ (ಡಬ್ಲ್ಯುಡಬ್ಲ್ಯುಇ) ದಿಗ್ಗಜ ಜಾನ್​ ಸೆನಾಗೆ ದ್ರಾವಿಡ್​ ಅವರೇ ಸ್ಫೂತಿರ್ಯಂತೆ..

    ಇದನ್ನೂ ಓದಿ: ಆಲ್ರೌಂಡರ್​ ರವೀಂದ್ರ ಜಡೇಜಾ ವೃತ್ತಿಜೀವನಕ್ಕೆ ತಿರುವು ನೀಡಿದ ಆ ಪಂದ್ಯ ಯಾವುದು ಗೊತ್ತೇ?

    ಸೇಡಿಗಾಗಿ ಆಡಬಾರದು, ಗೌರವ ಹಾಗೂ ಹೆಮ್ಮೆಗಾಗಿ ಆಡಬೇಕು ಎಂದು ದ್ರಾವಿಡ್​ ಹೇಳಿದ ಮಾತೇ ಡಬ್ಲ್ಯುಡಬ್ಲ್ಯುಇ ದಿಗ್ಗಜನಿಗೆ ಸ್ಫೂರ್ತಿಯಾಗಿದೆ. 2017ರಲ್ಲಿ ಜಾನ್​ ಸೆನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರೂ ಇಂದಿಗೂ ಈ ಪೋಸ್ಟ್​ ಚಾಲ್ತಿಯಲ್ಲಿರುವುದು ವಿಶೇಷ. ದ್ರಾವಿಡ್​ ಫೋಟೋ ಜತೆಗೆ ಕೋಟ್​ ಹಂಚಿಕೊಂಡಿದ್ದರು. ಬಹುತೇಕ ಮಾಧ್ಯಮಗಳಲ್ಲಿ ಈ ಮಾತು ಚರ್ಚೆಯಾಗಿರುವುದು ವಿಶೇಷ. ಇನ್​ಸ್ಟಾಗ್ರಾಂನಲ್ಲಿ ಸುಮಾರು 15.1 ಮಿಲಿಯನ್​ ಹಿಂಬಾಲಕರನ್ನು ಹೊಂದಿರುವ ಸೆನಾ, ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​, ಸ್ಟಾರ್​ ಅಮಿತಾಭ್​ ಬಚ್ಚನ್​, ರಣವೀರ್​ ಸಿಂಗ್​ ಪೋಸ್ಟ್​ಗಳನ್ನು ಶೇರ್​ ಮಾಡಿದ್ದಾರೆ.

    ಇದನ್ನೂ ಓದಿ: ದೇಶದ ಪ್ರತಿಷ್ಠಿತ ನಗರಗಳಲ್ಲಿ ಮನೆ ಖರೀದಿಸಿದ್ದಾರೆ ಎಂಎಸ್​ ಧೋನಿ.., 

    ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಮುಖ್ಯಸ್ಥರಾಗಿರುವ ಕನ್ನಡಿಗ ರಾಹುಲ್​ ದ್ರಾವಿಡ್​, ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತ ಎರಡನೇ ಸ್ಥರದ ತಂಡಕ್ಕೆ ಕೋಚ್​ ಆಗುವ ಸಾಧ್ಯತೆಗಳಿವೆ. ದ್ರಾವಿಡ್​ 2014ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದೊಂದಿಗೆ ಕಾರ್ಯನಿರ್ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts