More

    ಡಬ್ಲ್ಯುಡಬ್ಲ್ಯುಇ ದೈತ್ಯ ದಿ ಗ್ರೇಟ್​ ಖಲಿ ಅವರಿಗೆ ಮಾತೃ ವಿಯೋಗ

    ನವದೆಹಲಿ: ಡಬ್ಲ್ಯುಡಬ್ಲ್ಯುಇ ಮನರಂಜಾ ಕ್ರೀಡೆಯ ಕುಸ್ತಿಪಟು ಭಾರತದ ದಿ ಗ್ರೇಟ್​ ಖಲಿ ಅಲಿಯಾಸ್​ ದಲಿಪ್​ ಸಿಂಗ್​ ರಾಣಾ ಅವರ ತಾಯಿ ತಾಂದಿ ದೇವಿ (75) ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

    ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತಾಂದಿ ದೇವಿ ಅವರು ಪಂಜಾಬ್​ನ ಲೂಧಿಯಾನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ವಾರವಷ್ಟೇ ಖಲಿ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.

    ರಾಣಾ ಅಲಿಯಾಸ್​ ಖಲಿ 2000ರಲ್ಲಿ ಡಬ್ಲ್ಯುಡಬ್ಲ್ಯುಇ ಅಖಾಡಕ್ಕೆ ಇಳಿದರು. ಡಬ್ಲ್ಯುಡಬ್ಲ್ಯುಇ ವೃತ್ತಿಜೀವನವನ್ನು ಆರಂಭಿಸುವ ಮೊದಲು ಖಲಿ, ಪಂಜಾಬ್​ ಪೊಲೀಸ್​ ಅಧಿಕಾರಿಯಾಗಿದ್ದರು. ಅವರ ಡಬ್ಲ್ಯುಡಬ್ಲ್ಯುಇ ವೃತ್ತಿಜೀವನದ ಅವಧಿಯಲ್ಲಿ ಖಲಿ ಡಬ್ಲ್ಯುಡಬ್ಲ್ಯುಇ ಚಾಂಪಿಯನ್ ಸಹ ಆಗಿದ್ದಾರೆ.

    ಖಲಿ ಅವರು ನಾಲ್ಕು ಹಾಲಿವುಡ್ ಚಲನಚಿತ್ರಗಳು ಮತ್ತು ಎರಡು ಬಾಲಿವುಡ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಆರೋಗ್ಯಕ್ಕಾಗಿ ಯೋಗ ಮೂಲಮಂತ್ರ ಆಗಬೇಕು: ಅಂತಾರಾಷ್ಟ್ರೀಯ ಯೋಗ ದಿನದಂದು ನಮೋ ಸಂದೇಶ

    ಗ್ರಾಮೀಣ ಕರ್ನಾಟಕದಲ್ಲಿ ಮೂಡದ ಬೆಳಕು: 24*7 ವಿದ್ಯುತ್ ನೀಡುವ ಭರವಸೆ ಹುಸಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts