ಭಾರತೀಯ ಕ್ರಿಕೆಟ್​ನ ಸೂಪರ್​ಸ್ಟಾರ್​ ಸಂಸ್ಕೃತಿಗೆ ಹರ್ಭಜನ್ ಸಿಂಗ್​​ ಟೀಕೆ

web superstar
Published on

ನವದೆಹಲಿ: ಭಾರತೀಯ ಕ್ರಿಕೆಟ್​ ತಂಡದಲ್ಲಿರುವ "ಸೂಪರ್​ಸ್ಟಾರ್​ ಸಂಸ್ಕೃತಿ'ಯನ್ನು ಟೀಕಿಸಿರುವ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​, ಇದನ್ನು ಕೊನೆಗೊಳಿಸಿ, ನಿರ್ವಹಣೆಯ ಆಧಾರದಲ್ಲಿ ಆಟಗಾರರನ್ನು ತಂಡಕ್ಕೆ ಆರಿಸುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.

"ಭಾರತ ತಂಡದಲ್ಲಿ ಸೂಪರ್​ಸ್ಟಾರ್​ ಸಂಸ್ಕೃತಿ ಬೆಳೆದಿದೆ. ನಮಗೆ ಸೂಪರ್​ಸ್ಟಾರ್​ಗಳು ಅಗತ್ಯವಿಲ್ಲ. ಉತ್ತಮ ನಿರ್ವಹಣೆ ತೋರುವವರಷ್ಟೇ ಬೇಕು. ಸೂಪರ್​ಸ್ಟಾರ್​ ಸಂಸ್ಕೃತಿಯಿಂದ ತಂಡ ಬೆಳವಣಿಗೆ ಕಾಣುತ್ತಿಲ್ಲ. ಸೂಪರ್​ಸ್ಟಾರ್​ ಆಗಲು ಬಯಸುವವರು ಮನೆಯಲ್ಲಿರಬಹುದು ಮತ್ತು ಅಲ್ಲೇ ಕ್ರಿಕೆಟ್​ ಆಡಬಹುದು' ಎಂದು ಹರ್ಭಜನ್​ ತನ್ನ ಯುಟ್ಯೂಬ್​ ಚಾನಲ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜಸ್​ಪ್ರೀತ್​ ಬುಮ್ರಾ ಭಾರತ ತಂಡದಲ್ಲಿರದಿದ್ದರೆ ಬಾರ್ಡರ್​-ಗಾವಸ್ಕರ್​ ಟ್ರೋಫಿಯಲ್ಲಿ 0-5ರಿಂದ ಸೋಲಬೇಕಾಗುತ್ತಿತ್ತು ಎಂದೂ ಅವರು ಹೇಳಿದ್ದಾರೆ.

"ಮುಂದಿನ ಇಂಗ್ಲೆಂಡ್​ ಪ್ರವಾಸದ ಟೆಸ್ಟ್​ ಸರಣಿಗೆ ಯಾರು ಹೋಗಬೇಕು, ಯಾರು ಹೋಗಬಾರದು ಎಂಬುದಕ್ಕಿಂತ, ಉತ್ತಮ ನಿರ್ವಹಣೆ ತೋರುವವರನ್ನಷ್ಟೇ ಆರಿಸಬೇಕು. ಆಟಗಾರರನ್ನು ಅವರ ವರ್ಚಸ್ಸಿನ ಆಧಾರದಲ್ಲಿ ತಂಡಕ್ಕೆ ಆರಿಸಬಾರದು. ಅದೇ ಮುಖ್ಯವಾದರೆ ಕಪಿಲ್​ ದೇವ್ ಸರ್​ ಮತ್ತು ಅನಿಲ್​ ಭಾಯ್​ (ಕುಂಬ್ಳೆ) ಕೂಡ ತಂಡದಲ್ಲಿ ಸ್ಥಾನ ಪಡೆಯಲಿ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net