ಗುಕೇಶ್​ಗೆ ತಮಿಳುನಾಡು ಸರ್ಕಾರದಿಂದ ಭರ್ಜರಿ ಬಹುಮಾನ; ಕರ್ನಾಟಕದಿಂದ ಅಭಿನಂದನೆ

web chess fide
Published on

ಚೆನ್ನೈ: ಅತಿಕಿರಿಯ ಚೆಸ್​ ವಿಶ್ವ ಚಾಂಪಿಯನ್​ ಡಿ. ಗುಕೇಶ್​ಗೆ ತವರಿನ ತಮಿಳುನಾಡು ಸರ್ಕಾರದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಶುಕ್ರವಾರ 5 ಕೋಟಿ ರೂ. ಬಹುಮಾನ ಪ್ರಕಟಿಸಿದ್ದಾರೆ. ಈ ಬಹುಮಾನದೊಂದಿಗೆ ಗುಕೇಶ್​ರನ್ನು ಗೌರವಿಸಲು ಖುಷಿಯಾಗುತ್ತಿದೆ. ಈ ಐತಿಹಾಸಿಕ ಸಾಧನೆ ದೇಶಕ್ಕೆ ಅಪಾರ ಹೆಮ್ಮೆ ಮತ್ತು ಸಂತಸ ತಂದಿದೆ ಎಂದು ಸ್ಟಾಲಿನ್​ ಎಕ್ಸ್​ನಲ್ಲಿ ತಿಳಿಸಿದ್ದಾರೆ. ವಿಶ್ವ ಚಾಂಪಿಯನ್​ಷಿಪ್​ ಸಿದ್ಧತೆಗಾಗಿಯೂ ತಮಿಳುನಾಡು ಸರ್ಕಾರ ಗುಕೇಶ್​ಗೆ 85 ಲಕ್ಷ ರೂ. ನೀಡಿ ನೆರವಾಗಿತ್ತು.

ಕರ್ನಾಟಕ ಸರ್ಕಾರ ಅಭಿನಂದನೆ

ಬೆಳಗಾವಿ: ನೂತನ ಚೆಸ್​ ವಿಶ್ವ ಚಾಂಪಿಯನ್​ ಗುಕೇಶ್​ಗೆ ಕರ್ನಾಟಕ ಸರ್ಕಾರ ಅಭಿನಂದನೆ ಸಲ್ಲಿಸಿದೆ. ಶುಕ್ರವಾರ ವಿಧಾನಸಭೆ ಕಲಾಪದ ಕೊನೆಯಲ್ಲಿ ಸ್ಪೀಕರ್​ ಯುಟಿ ಖಾದರ್​, ಗುಕೇಶ್​ ಸಾಧನೆಯ ಬಗ್ಗೆ ಸದನದ ಗಮನಸೆಳೆದಾಗ ಸಚಿವ ಕೃಷ್ಣ ಬೈರೇಗೌಡ, ಸರ್ಕಾರದ ಪರವಾಗಿ ಗುಕೇಶ್​ಗೆ ಅಭಿನಂದನೆ ಸಲ್ಲಿಸಲು ಸಂತೋಷವಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net