

ನವದೆಹಲಿ: ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ಗೆ ಸವಾಲೊಡ್ಡುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕ್ಯಾಂಡಿಡೇಟ್ ಚೆಸ್ ಟೂರ್ನಿಗೆ ಇದೇ ಮೊದಲ ಬಾರಿಗೆ ಮೂವರು ಭಾರತೀಯರು ಆಯ್ಕೆಯಾಗಿದ್ದಾರೆ.
ಆರ್.ಪ್ರಜ್ಞಾನಂದ ಕಳೆದ ಚೆಸ್ ವಿಶ್ವಕಪ್ನಲ್ಲೇ ಈ ಅರ್ಹತೆ ಸಂಪಾದಿಸಿದ್ದರೆ, ಇದೀಗ ವಿದಿತ್ ಗುಜರಾತಿ ಮತ್ತು ಡಿ. ಗುಕೇಶ್ ಕೂಡ ಈ ಅವಕಾಶ ಪಡೆದಿದ್ದಾರೆ. 8 ಆಟಗಾರರ ಕ್ಯಾಂಡಿಡೇಟ್ ಟೂರ್ನಿ ಏಪ್ರಿಲ್ 2ರಿಂದ 25ರವರೆಗೆ ಟೊರಾಂಟೊದಲ್ಲಿ ನಡೆಯಲಿದೆ.