ಸವಾಲಿನ ಪಂದ್ಯದಲ್ಲಿ ಗೆಲ್ಲೋರು ಯಾರು? ಆರ್​ಸಿಬಿ ಎದುರಿಗೆ ನಿಲ್ಲುವವರು ಯಾರು? | GT vs MI

ವಿಜಯವಾಣಿ - 2025-05-30T145806.730
Published on

GT vs MI: ಕಳೆದ ಕ್ವಾಲಿಫೈರ್​-1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಭಾರೀ ಅಂತರದ ಗೆಲುವು ದಾಖಲಿಸಿದ ಆರ್​ಸಿಬಿ, ಇದೀಗ ನೇರವಾಗಿ ಐಪಿಎಲ್​ ಫೈನಲ್​ಗೆ ಲಗ್ಗೆಯಿಟ್ಟಿದೆ. ಫೈನಲ್​ ಹಣಾಹಣಿಗೆ ಸಿದ್ಧವಾಗಿರುವ ಬೆಂಗಳೂರು ಪಡೆ, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್​ ನಡುವೆ ಯಾರು ತಮ್ಮ ವಿರುದ್ಧ ಆಡಲು ಕಣಕ್ಕಿಳಿಯಲಿದ್ದಾರೆ ಎಂಬುದನ್ನು ನಿರೀಕ್ಷಿಸುತ್ತಿದೆ. ಸದ್ಯ ಈ ಕುತೂಹಲಕಾರಿ ಪಂದ್ಯಕ್ಕೂ ಮೊದಲು ಇನ್ನೂ ಎರಡು ಬಹುನಿರೀಕ್ಷಿತ ಪಂದ್ಯಗಳು ಬಾಕಿ ಉಳಿದಿದ್ದು, ಇದರಲ್ಲಿ ಯಾರಿಗೆ ಜಯ ಎಂಬುದೇ ರೋಚಕ.

ಇಂದು ಮುಲ್ಲನ್‌ಪುರದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಗೆಲುವಿಗಾಗಿ ಭಾರೀ ಪೈಪೋಟಿಗೆ ಸಜ್ಜಾಗಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್-2ಗೆ ಅರ್ಹತೆ ಪಡೆದರೆ, ಸೋತ ತಂಡ 18ನೇ ಆವೃತ್ತಿಯಿಂದ ಎಲಿಮಿನೇಟ್ ಆಗಲಿದೆ. ಈ ಸಂದರ್ಭದಲ್ಲಿ, ಪಂದ್ಯವು ಭಾರೀ ರೋಚಕತೆಗೆ ಸಾಕ್ಷಿಯಾಗುವ ಎಲ್ಲಾ ಸಾಧ್ಯತೆಗಳಿವೆ.

ಜೂನ್​ 03ಕ್ಕೆ ಫೈನಲ್​ ಫೈಟ್​

ಫೈನಲ್​ ಸ್ಥಾನದಲ್ಲಿ ಅಂಟಿ ಕುಳಿತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ, ತಮ್ಮ ಎದುರಾಳಿಯನ್ನು ಸ್ವಾಗತಿಸಲು ಪಣತೊಟ್ಟಿ ನಿಂತಿದೆ. ಈ ಮಧ್ಯೆ ಇಂದು ನಡೆಯುವ ಎಲಿಮಿನೇಟರ್ ಪಂದ್ಯವನ್ನು ಗೆದ್ದ ತಂಡವು ಕ್ವಾಲಿಫೈಯರ್ -2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲಿದೆ. ಈ ಕಾಳಗದಲ್ಲಿ ಯಾವ ತಂಡ ಗೆಲ್ಲಲಿದೆಯೋ ಅದು ಫೈನಲ್​ನಲ್ಲಿ ಆರ್‌ಸಿಬಿ ಜೊತೆ ಕಪ್‌ಗಾಗಿ ಪೈಪೋಟಿಗಿಳಿಯಲಿದೆ. ಐಪಿಎಲ್ 2025ರ ಫೈನಲ್ ಪಂದ್ಯವು ಜೂನ್ 3ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net