GT vs CSK: ಕಾನ್ವೆ ಅಬ್ಬರ, ಬ್ರೆವಿಸ್​ ಸ್ಫೋಟಕ ಇನ್ನಿಂಗ್ಸ್​! ಗಿಲ್​ ಪಡೆಗೆ 231 ರನ್​ ಗುರಿ

ವಿಜಯವಾಣಿ - 2025-05-25T171330.671
Published on

GT vs CSK: ಇಂದು (ಮೇ.25) ಅಹಮದಾಬಾದ್​ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಿಟಿ ಮತ್ತು ಸಿಎಸ್​ಕೆ ನಡುವಿನ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಪಡೆ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಪಡೆಗೆ ಆರಂಭಿಕರಾದ​ ಆಯುಷ್ ಮಾತ್ರೆ, ಡೆವಾನ್ ಕಾನ್ವೆ ಸ್ಫೋಟಕ ಓಪನಿಂಗ್ ನೀಡಿದರು. ತದನಂತರ ಕ್ರೀಸ್​ಗೆ ಬಂದ ಊರ್ವಿ ಪಟೇಲ್​, ಶಿವಂ ದುಬೆ ಉತ್ತಮ ಪ್ರದರ್ಶನ ನೀಡದೆ ಶೀಘ್ರವೇ ಪೆವಿಲಿಯನ್ ಹಾದಿ ಹಿಡಿದರು. ಈ ಸಮಯದಲ್ಲಿ ತಂಡಕ್ಕೆ ಆಸರೆಯಾಗಿದ್ದು ಡೆವಾಲ್ಡ್​ ಬ್ರೆವಿಸ್​ ಮತ್ತು ರವೀಂದ್ರ ಜಡೇಜಾ ಅವರ ಅಬ್ಬರದ ಬ್ಯಾಟಿಂಗ್.

ಜಡೇಜಾ ಮತ್ತು ಬ್ರೆವಿಸ್​ ಜತೆಯಾಟ ಸಿಎಸ್​ಕೆ ಒಟ್ಟು ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿತು. ಸ್ಫೋಟಕ ಇನ್ನಿಂಗ್ಸ್ ಕೊಡುಗೆ ನೀಡುವುದರೊಂದಿಗೆ ಆಕರ್ಷಕ ಅರ್ಧಶತಕ ಸಿಡಿಸಿದ ಬ್ರೆವಿಸ್​, ಸಿಎಸ್​ಕೆ  ತಂಡಕ್ಕೆ ಗೆಲುವಿನ ಭರವಸೆ ಹಂಚಿದ್ದಾರೆ. 231 ರನ್​ಗಳ ಬೃಹತ್​ ಗುರಿಯನ್ನು ಜಿಟಿ ತಲುಪಲಿದೆಯೇ ಅಥವಾ ಸೋತು ಶರಣಾಗಲಿದೆಯಾ ಎಂಬುದನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net