ತನ್ನದೇ ಕುಟುಂಬವನ್ನು ಸರ್ವನಾಶ ಮಾಡಿದ ಅಫಾನ್ ಸಾಯುವ ನಿರ್ಧಾರ! ಜೈಲಿನೊಳಗೆ ಆತ್ಮಹತ್ಯೆಗೆ ಯತ್ನ | Venjaramoodu Case

ವಿಜಯವಾಣಿ - 2025-05-25T153515.295
Published on

Venjaramoodu Murder Case: ಈ ವರ್ಷದ ಫೆ.24ರಂದು ತನ್ನದೇ ಕುಟುಂಬದ ನಾಲ್ವರು ಸದಸ್ಯರು ಮತ್ತು ಪ್ರೇಯಸಿ ಸೇರಿದಂತೆ ಒಟ್ಟು ಐವರನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ಅಫಾನ್​ ಸದ್ಯ ಕೇರಳ ಪೊಲೀಸರ ವಶದಲ್ಲಿದ್ದಾನೆ. ಅಜ್ಜಿ, ಕಿರಿಯ ಸಹೋದರ, ತಂದೆಯ ಸಹೋದರ ಲತೀಫ್​ ಮತ್ತು ಅವರ ಪತ್ನಿ ಶಾಹಿದಾ ಮತ್ತು ಪ್ರೇಯಸಿ ಫರ್ಸಾಳಾನನ್ನು ಸುತ್ತಿಗೆಯಿಂದ ಅಫಾನ್ ಭೀಕರವಾಗಿ ಕೊಲೆಗೈದ ಘಟನೆ ಅಂದು ಇಡೀ ಕೇರಳವನ್ನೇ ಬೆಚ್ಚಿಬೀಳಿಸಿತ್ತು. ಕೊಲೆ ಕೇಸ್​ನಲ್ಲಿ ಕಂಬಿ ಎಣಿಸುತ್ತಿರುವ ಆರೋಪಿ ಇದೀಗ ಜೈಲಿನೊಳಗೆ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಕುಟುಂಬದ ಸದಸ್ಯರನ್ನು ಅಮಾನುಷವಾಗಿ ಹಲ್ಲೆಗೈದಿದ್ದಲ್ಲದೇ, ಲತೀಫ್ ಮತ್ತು ಆತನ ಪತ್ನಿಗೆ 18ಕ್ಕೂ ಹೆಚ್ಚು ಬಾರಿ ಸುತ್ತಿಗೆ ಸೇರಿದಂತೆ ಇತರೆ ವಸ್ತುಗಳಿಂದ ಆಫಾನ್​ ಭೀಕರವಾಗಿ ಹತ್ಯೆಗೈದ ಘಟನೆ ಕೇರಳದ ತಿರುವನಂತಪುರಂನಲ್ಲಿ ಫೆ.24ರಂದು ವರದಿಯಾಯಿತು. ಪ್ರಸ್ತುತ ಕೊಲೆ ಪ್ರಕರಣದ ತನಿಖೆಯನ್ನು ನಡೆಸಿರುವ ಪೊಲೀಸರು, ಆರೋಪಿ ಅಫಾನ್​ನನ್ನು ಕೋರ್ಟ್​ ಆದೇಶದಂತೆ ಪೂಜಾಪ್ಪುರ ಕೇಂದ್ರ ಕಾರಾಗೃಹಕ್ಕೆ ಕಳಿಸಿದೆ.

ವೆಂಜರಮೂಡು ಹತ್ಯಾಕಾಂಡ ಪ್ರಕರಣದ ಅಪರಾಧಿ ಅಫಾನ್ ಪೂಜಾಪುರ ಕೇಂದ್ರ ಕಾರಾಗೃಹದ ಶೌಚಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪಯೋಗಿಸಲು ಕೊಟ್ಟಿದ್ದ ಬಟ್ಟೆಯನ್ನು ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಸೆಲ್‌ನಲ್ಲಿ ಅವನೊಂದಿಗಿದ್ದ ಖೈದಿ ಹೊರಗೆ ಹೋದ ಸಮಯವನ್ನು ನೋಡಿಕೊಂಡು ಅಫಾನ್​ ಆತ್ಮಹತ್ಯೆಗೆ ಮುಂದಾಗಿದ್ದಾನೆ ಎಂದು ವರದಿ ಹೇಳಿದೆ. ಸದ್ಯ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ ಸಹಾಯದಿಂದ ಅಫಾನ್​ಗೆ ಚಿಕಿತ್ಸೆ ನೀಡಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net