ಬಟ್ಲರ್​ ಸಿಕ್ಸರ್​ಗಳ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು ಬಾಯ್ಸ್​! ತವರಿನಲ್ಲೇ ಆರ್​ಸಿಬಿಗೆ ಭಾರೀ ಮುಖಭಂಗ | RCB vs GT

ವಿಜಯವಾಣಿ (1)
Published on

RCB vs GT: ಇಂದು (ಏ.02) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್​ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಜಿಟಿ ಮೊದಲು ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟಿಂಗ್​ ಇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ಆರಂಭಿಕ ಹಂತದಲ್ಲೇ ದೊಡ್ಡ ಆಘಾತ ಎದುರಾಯಿತು.

20 ಓವರ್​ ಅಂತ್ಯಕ್ಕೆ ಆರ್​ಸಿಬಿ 169 ರನ್​ಗಳನ್ನು ಕಲೆಹಾಕಿತು. 170 ರನ್​ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್​​ಗೆ ಆರಂಭಿಕ ಹಂತದಲ್ಲಿ ಕ್ಯಾಪ್ಟನ್​ ಶುಭಮನ್​ ಗಿಲ್​ ವಿಕೆಟ್​ ಪತನಗೊಂಡಿದ್ದು ಬಿಟ್ಟರೆ ಉಳಿದಂತೆ ನೀರು ಕುಡಿದಷ್ಟೇ ಸಲಿಸಲಾಯಿತು.

ಗಿಲ್​ ವಿಕೆಟ್​ ಹೋಗಿದ್ದೇ ತಡ ಕ್ರೀಸ್​ಗೆ ಅಂಟಿ ನಿಂತ ಸಾಯಿ ಸುದರ್ಶನ್​ ಮತ್ತು ಜಾಸ್​ ಬಟ್ಲರ್​, ಆರ್​ಸಿಬಿ ಬೌಲರ್​ಗಳ ಬೆವರಿಳಿಸುವಲ್ಲಿ ಯಶಸ್ವಿಯಾದರು. ಇವರಿಬ್ಬರ ಉತ್ತಮ ಜೊತೆಯಾಟ ಆರ್​ಸಿಬಿ ನೀಡಿದ್ದ ಗುರಿಯನ್ನು ಅತ್ಯಂತ ಸುಲಭವಾಗಿ ತಲುಪಲು ಕಾರಣವಾಯಿತು. ಇನ್ನು ಜಿಟಿ ಪರ ಬೌಲಿಂಗ್​ನಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್​, ಬರೋಬ್ಬರಿ ಮೂರು ವಿಕೆಟ್​ ಕಬಳಿಸುವ ಮೂಲಕ ಆರ್​ಸಿಬಿ ಬ್ಯಾಟರ್​ಗಳಿಗೆ ದುಃಸ್ವಪ್ನದಂತೆ ಕಾಡಿದರು.

ಜಿಟಿ ಬ್ಯಾಟಿಂಗ್ ವಿವರ

ಶುಭಮನ್​ ಗಿಲ್-​ 14 ರನ್​, 14 ಎಸೆತ

ಸಾಯಿ ಸುದರ್ಶನ್​- 49 ರನ್​, 36 ಎಸೆತ

ಜಾಸ್ ಬಟ್ಲರ್​- 73 ರನ್​, 33 ಎಸೆತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net