ಮತ್ತೆ ಭೂಕಂಪ; ಮ್ಯಾನ್ಮಾರ್​ನಲ್ಲಿ 3000 ಗಡಿದಾಟಿದ ಮೃತರ ಸಂಖ್ಯೆ! | Myanmar Earthquake

ವಿಜಯವಾಣಿ - 2025-04-02T220225.270
Published on
  • ರಿಕ್ಟರ್​ ಮಾಪಕದಲ್ಲಿ 4.3 ತೀವ್ರತೆ
  • ಶುಕ್ರವಾರವಷ್ಟೇ ಸಂಭವಿಸಿದ್ದ ಭೀಕರ ಭೂಕಂಪ

Myanmar: ಮ್ಯಾನ್ಮಾರ್​, ಬ್ಯಾಂಕಾಕ್​ ದೇಶಗಳಲ್ಲಿ ಸಂಭವಿಸಿರುವ ಭಾರೀ ಭೂಕಂಪನ ಜನರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಬೃಹತ್​ ಕಟ್ಟಡಗಳು, ರಸ್ತೆ, ಸೇತುವೆಗಳ ಕುಸಿತ, ಸಾವು-ನೋವು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಮ್ಯಾನ್ಮಾರ್​ನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಇದೀಗ 3 ಸಾವಿರ ಗಡಿದಾಟಿದ್ದು ಕುಸಿದ ಕಟ್ಟಡಗಳಡಿ ಮೃತಪಟ್ಟವರನ್ನು ಹೊರತರುವುದು ರಕ್ಷಣಾ ಪಡೆಗೆ ಹರಸಾಹಸವಾಗಿದೆ. ಇದನ್ನೂ ಓದಿ: ಯತ್ನಾಳ ಉಚ್ಛಾಟನೆ ಹಿಂಪಡೆಯಲು ಏ.10ರ ಗಡವು; ಬಸವರಾಜ ಹಾಲಪ್ಪನವರ

ಮತ್ತೇ ಭೂಕಂಪ

ಕಳೆದ ವಾರವಷ್ಟೇ ಭೀಕರ ಭೂಕಂಪಕ್ಕೆ ಒಳಗಾಗಿ, ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದ ಮ್ಯಾನ್ಮಾರ್​ನಲ್ಲಿ ಮತ್ತೊಂದು ಭೂಕಂಪನ ಸಂಭವಿಸಿದೆ. ಬುಧವಾರ (ಏ.02) ಸಂಭವಿಸಿದ ಈ ಭೂಕಂಪನದ ತೀವ್ರತೆ ರಿಕ್ಟರ್​ ಮಾಪಕದಲ್ಲಿ 4.3 ಆಗಿರುವುದು ವರದಿಯಾಗಿದೆ. ಈ ಕಂಪನದ ಕೇಂದ್ರ ಬಿಂದು ಹತ್ತು ಕಿಲೋಮೀಟರ್​ನಷ್ಟು ಆಳದಲ್ಲಿದ್ದು, ಸಾವು-ನೋವು ಅಥವಾ ಹಾನಿಗಳ ಕುರಿತು ಇನ್ನೂ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ನ್ಯಾಷನಲ್​ ಸೆಂಟರ್​ ಆಸಿಸ್​ಸ್ಮಾಲಜಿ ತಿಳಿಸಿದೆ.

ಮ್ಯಾನ್ಮಾರ್​ನಲ್ಲಿ ಕಳೆದ ವಾರ ಮಾ.28ರ ಶುಕ್ರವಾರ ಭಾರಿ ಭೂಕಂಪ ಸಂಭವಿಸಿತ್ತು. ರಿಕ್ಟರ್​ ಮಾಪಕದಲ್ಲಿ 7.7 ತೀವ್ರತೆಯ ಈ ಭೂಕಂಪದಿಂದಾಗಿ ನೆರೆಯ ಥಾಯ್ಲೆಂಡ್​ನಲ್ಲೂ ಗಗನಚುಂಬಿ ಕಟ್ಟಡಗಳು ಅಲುಗಾಡಿದ್ದು, ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ಸಾವು-ನೋವು ಸಂಭವಿಸಿತ್ತು.

ಇತ್ತೀಚೆಗಿನ ಮಾಹಿತಿ ಪ್ರಕಾರ, ಈ ಭೀಕರ ಭೂಕಂಪದಿಂದ 3000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, 4,639 ಜನರು ಗಾಯಗೊಂಡಿದ್ದಾರೆ. ಅಲ್ಲದೆ 30 ಲಕ್ಷಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net