Ramandeep singh: ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಕ್ಯಾಚ್.. ಒಂದೇ ಕೈಯಿಂದ ಅದ್ಭುತ ಕ್ಯಾಚ್ ಹಿಡಿದಿದ್ದು ಹೇಗೆ ಗೊತ್ತಾ?

ranadeep
Published on

ನವದೆಹಲಿ: ಏಷ್ಯಾ ಕಪ್-2024 ರಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಶನಿವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ರಮಣದೀಪ್(Ramandeep singh) ಸಿಂಗ್ ಹಿಡಿದ ಕ್ಯಾಚ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮವಾಗಿತ್ತು ಎನ್ನಲಾಗುತ್ತಿದೆ.

ಭಾರತ ಎ ತಂಡದ ಕ್ರಿಕೆಟಿಗ ರಮಣದೀಪ್ ಸಿಂಗ್ ಅದ್ಭುತ ಕ್ಯಾಚ್ ಪಡೆದರು. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಕ್ಯಾಚ್ ಎಂದು ಕರೆಯಲಾಗುತ್ತಿದೆ.

ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಇದೊಂದು ಶ್ರೇಷ್ಠ ಕ್ಯಾಚ್ ಎಂದು ಬಣ್ಣಿಸಿದ್ದಾರೆ. ರಮಣದೀಪ್ ಸಿಂಗ್ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು. ಅವರು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ಅನೇಕ ಅದ್ಭುತ ಕ್ಯಾಚ್‌ಗಳನ್ನು ಪಡೆದಿದ್ದಾರೆ. ಫೀಲ್ಡಿಂಗ್ ಸ್ಟಂಟ್ ಗಳಲ್ಲಿ ಫೇಮಸ್ ಆಗಿರುವ ರಮಣದೀಪ್ ಈ ಬಾರಿ ಅದ್ಭುತ ಕ್ಯಾಚ್​ ಹಿಡಿಯುವ ಮೂಲಕ ಪಾಕಿಸ್ತಾನ ತಂಡ ಹಾಗೂ ವಿಶ್ವದ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೊಳಿಸಿದ್ದಾರೆ.

ಓಮನ್‌ನ ಮಸ್ಕತ್‌ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರಣದೀಪ್ ಮಿಡ್ ವಿಕೆಟ್ ಬೌಂಡರಿಯಲ್ಲಿ ಸೂಪರ್ ಕ್ಯಾಚ್ ಪಡೆದರು. ಪಾಕಿಸ್ತಾನದ ಇನಿಂಗ್ಸ್ ನ 9ನೇ ಓವರ್ ನಲ್ಲಿ ಸ್ಪಿನ್ನರ್ ನಿಶಾಂತ್ ಸಿಂಧು ಮೊದಲ ಎಸೆತವನ್ನು ಯಾಸಿರ್ ಖಾನ್ ಗೆ ಲೆಂತ್​ ಎಸೆತದಲ್ಲಿ ಎಸೆದರು. ಮಿಡ್​ ವಿಕೆಟ್​ನಲ್ಲಿ ಚೆಂಡಿನ ವೇಗವನ್ನು ಕಂಡು ರಣದೀಪ್​ ಗಾಳಿಯಲ್ಲಿ ಹಾರಿ ನೆಲದ ಮೇಲೆ ಧುಮುಕಿದರು. ಒಂದೇ ಕೈಯಿಂದ ಅದ್ಭುತ ಕ್ಯಾಚ್ ಹಿಡಿದರು. ಅವರ ನೈಪುಣ್ಯವನ್ನು ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದರು.

ಹಿಡಿಯುವ ಸಮಯದಲ್ಲಿ ರಣದೀಪ್​ ಇಡೀ ದೇಹವು ಗಾಳಿಯಲ್ಲಿತ್ತು. ಪಾಕಿಸ್ತಾನದ ಆರಂಭಿಕ ಆಟಗಾರ ಯಾಸಿರ್ ಖಾನ್ ಔಟಾಗಿದ್ದರಿಂದ ಪೆವಿಲಿಯನ್ ಗೆ ತೆರಳಬೇಕಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಬೆಸ್ಟ್ ಕ್ಯಾಚ್ ಎಂದು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net