ಕೊನೇ ಓವರ್​ನಲ್ಲಿ ಗ್ಲೆನ್​ ಫಿಲಿಪ್ಸ್ ಮ್ಯಾಜಿಕ್​; ಲಂಕಾ ವಿರುದ್ಧ ಟಿ20 ಸರಣಿ ಸಮಬಲ ಸಾಧಿಸಿದ ಕಿವೀಸ್​!

web nz
Published on

ಡಂಬುಲಾ: ಬೌಲಿಂಗ್​ನಲ್ಲಿ ದಿಟ್ಟ ತಿರುಗೇಟು ನೀಡಿದ ನ್ಯೂಜಿಲೆಂಡ್​ ತಂಡ ಆತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ 2ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಲ್ಪಮೊತ್ತವನ್ನು ರಸಿಕೊಂಡು 5 ರನ್​ಗಳಿಂದ ಜಯಿಸಿದೆ. ಕೊನೇ ಓವರ್​ನಲ್ಲಿ ಲಂಕಾಗೆ 8 ರನ್​ ಬೇಕಿದ್ದಾಗ ಗ್ಲೆನ್​ ಫಿಲಿಪ್ಸ್​ 5 ಎಸೆತಗಳಲ್ಲಿ 3 ವಿಕೆಟ್​ ಉರುಳಿಸಿ ಕಿವೀಸ್​ ಗೆಲ್ಲಿಸಿದರು. ಇದರಿಂದ 2 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ.

ರಣಗಿರಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕಿವೀಸ್​, ಸ್ಪಿನ್ನರ್​ ವಾನಿಂದು ಹಸರಂಗ (17ಕ್ಕೆ 4) ಮತ್ತು ವೇಗಿ ಮಥೀಶ ಪಥಿರಣ (11ಕ್ಕೆ 3) ಮಾರಕ ದಾಳಿಗೆ ಕುಸಿದು 19.3 ಓವರ್​ಗಳಲ್ಲಿ 108 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಲಂಕಾ 19.5 ಓವರ್​ಗಳಲ್ಲಿ 103 ರನ್​ಗಳಿಗೆ ಆಲೌಟ್​ ಆಗಿ ಸೋಲುಂಡಿತು.

ನ್ಯೂಜಿಲೆಂಡ್​: 19.3 ಓವರ್​ಗಳಲ್ಲಿ 108 (ರಾಬಿನ್​ಸನ್​ 0, ಯಂಗ್​ 30, ಚಾಪ್​ಮನ್​ 2, ಫಿಲಿಪ್ಸ್​ 4, ಬ್ರೇಸ್​ವೆಲ್​ 0, ಸ್ಯಾಂಟ್ನರ್​ 19, ಕ್ಲಾರ್ಕ್​ಸನ್​ 24, ಹಸರಂಗ 17ಕ್ಕೆ 4, ಪಥಿರಣ 11ಕ್ಕೆ 3, ತುಷಾರ 22ಕ್ಕೆ 2). ಶ್ರೀಲಂಕಾ: 19.5 ಓವರ್​ಗಳಲ್ಲಿ 103 (ನಿಸ್ಸಂಕಾ 52, ಕಮಿಂಡು 1, ಅಸಲಂಕಾ 0, ರಾಜಪೆ 15, ತೀಕ್ಷಣ 14, ಗ್ಯುರ್ಸನ್​ 7ಕ್ಕೆ 3, ಬ್ರೇಸ್​ವೆಲ್​ 23ಕ್ಕೆ 2, ಫಿಲಿಪ್ಸ್​ 6ಕ್ಕೆ 3).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net