ಪಂತ್​ ಪಲ್ಟಿಗಾಗಿ ಗವಾಸ್ಕರ್​ ಬೇಡಿಕೆ! ಕ್ರಿಕೆಟ್​ ದಿಗ್ಗಜನ ಕೋರಿಕೆಗೆ 'ಸೆಂಚುರಿ ಸ್ಟಾರ್'​ ಕೊಟ್ಟ ಪ್ರತಿಕ್ರಿಯೆ ಇದು | Rishabh Pant

ವಿಜಯವಾಣಿ - 2025-06-23T205621.526
Published on

Rishabh Pant: ಹೆಡಿಂಗ್ಲಿಯಲ್ಲಿ​ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೊದಲ ಟೆಸ್ಟ್​ನ 4ನೇ ದಿನದ ಆಟದಲ್ಲಿ ಭಾರತ ಹೆಚ್ಚುವರಿ ರನ್​ಗಳಿಂದ ಮುಂಚೂಣಿಯಲ್ಲಿದೆ. ತಂಡದ ಪರ ಕನ್ನಡಿಗ ಕೆ.ಎಲ್​. ರಾಹುಲ್​ ಮತ್ತು ಟೀಮ್ ಇಂಡಿಯಾ ಉಪನಾಯಕ ರಿಷಭ್ ಪಂತ್​, ಭರ್ಜರಿ ಶತಕ ದಾಖಲಿಸಿದ್ದಾರೆ.

ಇಂಗ್ಲೆಂಡ್​ ವೇಗಿಗಳ ಬೆವರಿಳಿಸುವಲ್ಲಿ ಯಶಸ್ವಿಯಾಗಿರುವ ರಾಹುಲ್ ಮತ್ತು ಪಂತ್​, ಟೀಮ್ ಇಂಡಿಯಾ ಪರ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಮೊದಲ ಟೆಸ್ಟ್​ನಲ್ಲೇ ಎರಡು ಶತಕ ದಾಖಲಿಸಿದ ರಿಷಭ್ ಪಂತ್,​ ಖಂಡಿತ ಈ ಬಾರಿಯೂ ಪಲ್ಟಿ ಹೊಡೆದು ಸಂಭ್ರಮಿಸುತ್ತಾರೆ ಎಂದೇ ಸ್ಟೇಡಿಯಂನಲ್ಲಿ ಕುಳಿತ ಕ್ರಿಕೆಟ್​ ಪ್ರಿಯರು ಆಶಿಸಿದ್ದರು. ಆದ್ರೆ, ಪಂತ್​ ಪಲ್ಟಿ ಸಂಭ್ರಮಕ್ಕೆ ಅವಕಾಶ ಕೊಡಲಿಲ್ಲ. ಬದಲಿಗೆ ಮುಂದಕ್ಕೆ ಹಾಕಿದರು. ಈ ವೇಳೆ ಕ್ರಿಕೆಟ್​ ದಂತಕಥೆ ಸುನಿಲ್ ಗವಾಸ್ಕರ್​ ಮಾಡಿಕೊಂಡ ಮನವಿಯೊಂದು ಸಖತ್ ವೈರಲ್ ಆಗಿದೆ.

ರಿಷಭ್ ಪಂತ್ ಸೆಂಚುರಿ ಹೊಡೆದ ಬೆನ್ನಲ್ಲೇ ಪಲ್ಟಿ ಹೊಡೆಯುವಂತೆ ತಾವು ಕುಳಿತಿದ್ದ ಜಾಗದಿಂದಲೇ ಗವಾಸ್ಕರ್ ಕೇಳಿದರು. ಇದಕ್ಕೆ ಉತ್ತರಿಸಿದ ರಿಷಭ್​, ಇಲ್ಲ ನಾನು ಪಂದ್ಯ ಗೆದ್ದ ಬಳಿಕ ಹೊಡೆಯುತ್ತೇನೆ ಎಂದು ಕೈಸನ್ನೆ ಮೂಲಕ ಹೇಳಿದರು. ಚಿಕ್ಕ ಮಕ್ಕಳಂತೆ ಸುನಿಲ್ ಗವಾಸ್ಕರ್ ಮಾಡಿಕೊಂಡ ಮನವಿ ದೃಶ್ಯ ಸದ್ಯ ಜಾಲತಾಣಗಳಲ್ಲಿ ಹರಿದಾಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net