ತಂಡದಲ್ಲಿನ ಅಶ್ತಿಸ್ತು, ಹಿರಿಯ ಆಟಗಾರರ ಬಗ್ಗೆ ದೂರು; ಬಿಸಿಸಿಐಗೆ ಹೊಸ ನಿಯಮಗಳನ್ನು ಪ್ರಸ್ತಾಪಿಸಿದ Gautam Gambhir

Gautam Virat Rohit
Published on

ಮುಂಬೈ: ನ್ಯೂಜಿಲೆಂಡ್​ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲಿನ ಬಳಿಕ ಟೀಮ್​ ಇಂಡಿಯಾದಲ್ಲಿ ಬಿಸಿಸಿಐ ಕೆಲವು ಬದಲಾವಣೆಗಳನ್ನು ತರಲು ಮುಂದಾಗಿದ್ದು, ಕೋಚ್​ ಗೌತಮ್​ ಗಂಭೀರ್ (Gautam Gambhir)​ ಮತ್ತು ನಾಯಕ ರೋಹಿತ್​ ಶರ್ಮರ ಕಾರ್ಯಕ್ಷಮತೆಯನ್ನು ಪ್ರಶ್ನಿಸಿದೆ, ಇತ್ತೀಚಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಬದಲಾವಣೆಗಳ ಬಗ್ಗೆ ಚರ್ಚಿಸಲಾಗಿದ್ದು, ಗೌತಮ್​ ಗಂಭೀರ್​ ಆಟಗಾರರ ಅಶಿಸ್ತಿನ ಬಗ್ಗೆ ದೂರು ನೀಡಿರುವುದಾಗಿ ವರದಿಯಾಗಿದೆ. ಈ ಸಂಬಂಧ ಬಿಸಿಸಿಐ ಬದಲಾವಣೆಗಳನ್ನು ಜಾರಿಗೆ ತರಲು ಮುಂದಾಗಿದೆ.

ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ, ಬಿಸಿಸಿಐ ನಡೆಸಿದ ಪರಿಶೀಲನಾ ಸಭೆಯಲ್ಲಿ ಗೌತಮ್​ ಗಂಭೀರ್​ (Gautam Gambhir) ಆಟಗಾರರ ಅಶಿಸ್ತಿನ ವರ್ತನೆ ಬಗ್ಗೆ ಧ್ವನಿ ಎತ್ತಿದ್ಧಾರೆ ಎಂದು ತಿಳಿದು ಬಂದಿದೆ. ಆಟಗಾರರು ಡ್ರೆಸ್ಸಿಂಗ್​ ರೂಮ್​ನ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಫ್ಯಾಮಿಲಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹೀಗಾಗಿ ಕೋವಿಡ್​ ಸಮಯದಲ್ಲಿ ಜಾರಿ ಮಾಡಲಾಗಿದ್ದ ನಿಯಮಗಳನ್ನು ಪುನರ್​ ಜಾರಿ ಮಾಡುವಂತೆ ಸಭೆಯಲ್ಲಿ ಕೋರಲಾಗಿದೆ.

Gautam Gambhir

ಇದಲ್ಲದೆ ಸಭೆಯಲ್ಲಿ ಹಾಜರಿದ್ದ ಹಿರಿಯ ಆಟಗಾರರೊಬ್ಬರು, ಆಟಗಾರರಿಗೆ ಪಂದ್ಯದ ಶುಲ್ಕವನ್ನು ತಕ್ಷಣವೇ ವಿತರಿಸಬಾರದು ಎಂದು ಸೂಚಿಸಿದ್ದು, ದೇಶೀಯ ಟೂರ್ನಿ ಹಾಗೂ ಇನ್ನಿತರೆ ಪಂದ್ಯಗಳಲ್ಲಿ ಪ್ರದರ್ಶನವನ್ನು ಗಮನಿಸಿ ಆಟಗಾರರಿಗೆ ಪಂದ್ಯ ಶುಲ್ಕವನ್ನು ವಿತರಿಸಬೇಕು ಎಂದು ಸಲಹೆ ನೀಡಿರುವುದಾಗಿ ವರದಿಯಾಗಿದೆ. ಬಿಸಿಸಿಐ ಇನ್ನಷ್ಟೇ ಈ ಬಗ್ಗೆ ನಿರ್ಧರಿಸಬೇಕಿದೆ.

ಸರಣಿಗಳ ಸೋಲಿನ ಬೆನ್ನಲ್ಲೇ ಬಿಸಿಸಿಐ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿದ್ದು, ಆಟಗಾರರು ಹಾಗೂ ಕೋಚ್​ಗೆ ಬಿಸಿ ಮುಟ್ಟಿಸಿದೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ ತಂಡದ ಪ್ರದರ್ಶನ ಆಧರಿಸಿ ಬಿಸಿಸಿಐ ಕ್ರಮ ಜರುಗಿಸಲು ಮುಂದಾಗಿದ್ದು, ಅಂತಿಮವಾಗಿ ಏನಾಗಲಿದೆ ಎಂದು ಮುಂದಿನ ಕೆಲವೇ ದಿನಗಳಲ್ಲಿ ತಿಳಿದು ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net