ವಾಪಸ್​ ಬರುವಾಗ ಏನ್​ ತಂದ್ರು ಗೊತ್ತಾ ಹ್ಯಾಸಲ್​ವುಡ್​? ಇಲ್ಲಿಂದಲೇ ಬದಲಾಗಿದ್ದು RCB ಲಕ್​!

ವಿಜಯವಾಣಿ - 2025-05-30T103557.327
Published on

RCB: ನಿನ್ನೆ (ಮೇ.29) ನಡೆದ ಇಂಡಿಯನ್​​ ಪ್ರೀಮಿಯರ್ ಲೀಗ್-2025ರ ಕ್ವಾಲಿಫೈಯರ್-1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಮಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತು. ಬಹಳ ಸುಲಭವಾಗಿ ಪಂಜಾಬ್​ ಎದುರು ಗೆದ್ದು ಬೀಗಿದ ಆರ್​ಸಿಬಿ, ಬರೋಬ್ಬರಿ 9 ವರ್ಷಗಳ ಬಳಿಕ ಐಪಿಎಲ್ ಇದೀಗ​ ಫೈನಲ್​ಗೆ ಪ್ರವೇಶಿಸಿದೆ.

ಜೋಶ್​ನೊಂದಿಗೆ ಬಂತು 'ಜೋಶ್'​!

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್​ಸಿಬಿ, ಪಂಜಾಬ್ ಬ್ಯಾಟರ್​ಗಳಿಗೆ ಬೌಲಿಂಗ್​ನಲ್ಲೇ ದುಃಸ್ವಪ್ನವಾಗಿ ಕಾಡಿತು. ತಂಡದ ಪರ ಸುಯಾಶ್ ಶರ್ಮಾ ಮತ್ತು ಜೋಶ್​ ಹೆಜಲ್‌ವುಡ್ ತಲಾ 3 ವಿಕೆಟ್ ಪಡೆದರೆ, ಯಶ್ ದಯಾಳ್ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ಶೆಫರ್ಡ್ ತಲಾ ಒಂದು ವಿಕೆಟ್ ಕಬಳಿಸಿ, ಆರ್​ಸಿಬಿ ಪರ ಮಿಂಚಿದರು. ಕಳೆದ ಪಂದ್ಯದಲ್ಲಿ ತಂಡದ ಪರ ಆಡದ ಜೋಶ್​, ಕ್ವಾಲಿಫೈಯರ್​-1 ಪಂದ್ಯಕ್ಕೆ ಕಮ್​ಬ್ಯಾಕ್​ ಮಾಡಿದ್ದೋ ಮಾಡಿದ್ದು, ತಂಡದಲ್ಲಿ ಹೊಸ ಜೋಶ್​ ಅನ್ನೇ ಹೊತ್ತು ತಂದರು. ಅದೇ ರೀತಿ ಅತ್ಯುತ್ತಮ ಪ್ರದರ್ಶನ ನೀಡಿದರು. ಇದು ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು.

ಪಂಜಾಬ್​ ವಿರುದ್ಧ ಕಣಕ್ಕಿಳಿದಿದ್ದೇ ತಡ ಬೌಲಿಂಗ್​ ಜಾದೂ ತೋರಿಸಿದ ಜೋಶ್​, ತಂಡದ ಆಟಗಾರರಲ್ಲಿ ಹಾಗೂ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತಂದಿದ್ದು, ಪಂದ್ಯ ಪೂರ ಅಭಿಮಾನಿಗಳಿಗೆ ಕಾಣಿಸಿತು. 8 ವಿಕೆಟ್​ಗಳಿಂದ ಕ್ವಾಲಿಫೈಯರ್​ 1ರಲ್ಲಿ ಗೆದ್ದ ಆರ್​ಸಿಬಿ ಈಗ ಫೈನಲ್​ನಲ್ಲಿ ಅಬ್ಬರಿಸಲು ಎದುರುನೋಡುತ್ತಿದೆ. ಮಂಗಳವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಆರ್​ಸಿಬಿ ತಂಡ ಕ್ವಾಲಿಫೈಯರ್-2 ವಿಜೇತರನ್ನು ಎದುರಿಸಲಿದೆ. ಈ ಕೊನೆ​ ಹಂತದಲ್ಲಿ ಆರ್​ಸಿಬಿಗೆ ಸವಾಲು ಹಾಕುವ ತಂಡ ಯಾವುದು ಎಂಬುದೇ ಇದೀಗ ಕೌತುಕದ ಪ್ರಶ್ನೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net