

ಬೆಂಗಳೂರು: ದುಬೈನಲ್ಲಿ ಬುಧವಾರದಿಂದ ನಡೆಯಲಿರುವ ಏಷ್ಯನ್ ಜೂನಿಯರ್ (20 ವಯೋಮಿತಿ) ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ನಾಲ್ವರು ಮಹಿಳಾ ಅಥ್ಲೀಟ್ಗಳು ಸ್ಪರ್ಧಿಸಲಿದ್ದಾರೆ. ಪಾವನಾ ನಾಗರಾಜ್ ಲಾಂಗ್ಜಂಪ್ ಮತ್ತು ಹೆಪ್ಟಾಥ್ಲಾನ್, ಉನ್ನತಿ ಅಯ್ಯಪ್ಪ 100 ಮೀ. ಹರ್ಡಲ್ಸ್, ಶ್ರೀಯಾ ರಾಜೇಶ್ 400 ಮೀ. ಹರ್ಡಲ್ಸ್ ಮತ್ತು ನಿಯೋಲ್ ಕಾರ್ನೆಲಿಯೊ 4/100 ಮೀ. ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದ ಮಾಜಿ ಅಥ್ಲೀಟ್ಗಳಾದ ಸಹನಾ ಕುಮಾರಿ ಮತ್ತು ಅಶ್ವಿನಿ ಅಕ್ಕುಂಜಿ ಕೋಚ್ಗಳಾಗಿ ತಂಡದೊಂದಿಗೆ ತೆರಳಿದ್ದಾರೆ. ಇದು ಆಗಸ್ಟ್ನಲ್ಲಿ ಪೆರುನಲ್ಲಿ ನಡೆಯಲಿರುವ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ ಅರ್ಹತಾ ಕೂಟವೂ ಆಗಿದೆ.
2023ರ ಏಷ್ಯಾ ಕಿರಿಯರ ಕೂಟದಲ್ಲಿ ಭಾರತ 6 ಚಿನ್ನ, 7 ಬೆಳ್ಳಿ ಸಹಿತ ಸಹಿತ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿತ್ತು.