

Sourav Ganguly: ಇತ್ತೀಚೆಗೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲುಂಡಿದ್ದಕ್ಕೆ ಭಾರತದ ಮಾಜಿ ನಾಯಕ ಸೌರವ್(Sourav Ganguly) ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತದ ಲಾರ್ಡ್ಸ್ ಟೆಸ್ಟ್ ಸೋಲಿನ ಬಗ್ಗೆ ಮಾತನಾಡಿದ ಗಂಗೂಲಿ ನನಗೆ ಸ್ವಲ್ಪ ನಿರಾಶೆಯಾಯಿತು. ಏಕೆಂದರೆ ಭಾರತವು ಈ ಸರಣಿಯಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದೆ. ಈ ಪಂದ್ಯವನ್ನು ಭಾರತ ಗೆಲ್ಲಬೇಕಿತ್ತು, 193 ರನ್ಗಳನ್ನು ಸುಲಭವಾಗಿ ಭಾರತ ಚೇಸ್ ಮಾಡಬಹುದಿತ್ತು. ನನ್ನ ಪ್ರಕಾರ ನನಗಿಂತ ತಂಡದ ಆಟಗಾರರಿಗೆ ತುಂಬಾ ಬೇಸರವಾಗಿರುತ್ತಾದೆ" ಎಂದು ಹೇಳಿದರು.
4ನೇಯ ದಿನದಲ್ಲಿ ಭಾರತದ ಬೌಲರ್ಗಳ ಮಾರಕ ದಾಳಿಗೆ ನಲುಗಿದ ಆಂಗ್ಲರು 192 ರನ್ಗಳಿಗೆ ಅಲೌಟ್ ಆಯಿತು. ಪಂದ್ಯದ ಕೊನೆಯ ದಿನ ಬ್ಯಾಟಿಂಗ್ ಆರಂಭಿಸಿದ ಭಾರತ 82 ರನ್ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಭಾರತದ ಸ್ಟಾರ್ ಅಲ್ರೌಂಡರ್ ರವೀಂದ್ರಾ ಜಡೇಜಾ ದಿಟ್ಟ ಹೋರಾಟ ನಡೆಸಿದರು. ಆದರೆ, ತಂಡಕ್ಕೆ ಗೆಲುವು ತಂದುಕೊಡಲು ವಿಫಲವಾದರು. ಕೊನೆಯಲ್ಲಿ ಸಿರಾಜ್ ವಿಕೆಟ್ ಪಡೆಯುವ ಮೂಲಕ ಆಂಗ್ಲರು ಪಂದ್ಯವನ್ನು ಗೆದ್ದುಕೊಂಡರು. (ಏಜೆನ್ಸೀಸ್)