ಲೈಂಗಿಕ ಕಿರುಕುಳದಿಂದ ಕಾಲೇಜು ವಿದ್ಯಾರ್ಥಿನಿ ಸಾವು: ಬಾಲಸೋರ್ ಬಂದ್​​ಗೆ ಕರೆ ಕೊಟ್ಟ ಬಿಜೆಡಿ! Balasore bandh

Balasore bandh
Published on

Balasore bandh: ತನ್ನ ಶಿಕ್ಷಕನಿಂದ ಲೈಗಿಕ ಕಿರುಕುಳ ಹಿನ್ನೆಲೆಯಲ್ಲಿ 20 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ವಿರೋಧಿಸಿ ಬಿಜು ಜನತಾ ದಳ (BJD) ಓಡಿಶಾ ಸರ್ಕಾರ ವಿರುದ್ಧ ಬಾಲಸೋರ್​ ಬಂದ್​ಗೆ ಕರೆ ನೀಡಿದೆ.

ಲೈಂಗಿಕ ಕಿರುಕುಳದ ವಿಷಯದಲ್ಲಿ ಸರ್ಕಾರದ ನಿಷ್ಕ್ರಿಯತೆಯ ವಿರುದ್ಧ ಹಾಗೂ ಸಿಎಂ ಮೋಹನ್​ ಚರಣ್ ಮಾಝಿ (Mohan Charan Majhi) ಮತ್ತು ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್(​Suryabamshi Suraj) ರಾಜೀನಾಮೆಗೆ BJD ಪಕ್ಷದ ಕಾರ್ಯಕರ್ತರು ಒತ್ತಾಯಿಸಿದರು.

ಈ ಪ್ರಕರಣದ ಕುರಿತು ಎಕ್ಸ್ ನಲ್ಲಿ ಪೋಸ್ಟ್​ ಮಾಡಿರುವ ಓಡಿಶಾದ ಮಾಜಿ ಮುಂಖ್ಯಮಂತ್ರಿ ನವೀನ್​ ಪಟ್ನಾಯಕ್ ​(Naveen Patnaik) "ವಿಫಲವಾದ ವ್ಯವಸ್ಥೆಯು ಒಬ್ಬರ ಜೀವವನ್ನು ಹೇಗೆ ತೆಗೆದುಕೊಳ್ಳಬಹುದು ಎಂದು ಯೋಚಿಸುವುದು ಇನ್ನೂ ಹೆಚ್ಚು ತೊಂದರೆದಾಯಕವಾಗಿದೆ. ಅತ್ಯಂತ ನೋವಿನ ಸಂಗತಿಯೆಂದರೆ ಇದು ಅಪಘಾತವಲ್ಲ, ಬದಲಿಗೆ ಸಹಾಯ ಮಾಡುವ ಬದಲು ಮೌನವಾಗಿದ್ದ ವ್ಯವಸ್ಥೆಯ ಪರಿಣಾಮವಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಾ ಯುವತಿ ಅಂತಿಮವಾಗಿ ಕಣ್ಣು ಮುಚ್ಚಿದಳು" ಎಂದು ಪಟ್ನಾಯಕ್ ಬರೆದುಕೊಂಡಿದ್ದಾರೆ.

ಅಡಳಿತದ ನಿಷ್ಕ್ರಿಯತೆಯನ್ನು ಒತ್ತಿ ಹೇಳಿದ ಪಟ್ನಾಯಕ್​, ಸಹಾಯ ಪಡೆಯಲು ಪದೇ ಪದೇ ಪ್ರಯತ್ನಿಸಿದರೂ ಸರ್ಕಾರವು ವಿದ್ಯಾರ್ಥಿಯನ್ನು ನಿರ್ಲಕ್ಷಿಸಿದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net