ಮರಳಿ ಕಣಕ್ಕಿಳಿಯಲು ಸಜ್ಜಾದ ಯುವರಾಜ್​ ಸಿಂಗ್! ಲೆಜೆಂಡ್ಸ್​ ಕ್ರಿಕೆಟ್​ನಲ್ಲಿ ನ್ಯೂಯಾರ್ಕ್​ ಸ್ಟ್ರೈಕರ್ಸ್​ ಸಾರಥ್ಯ

yuvraj web
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಲ್ರೌಂಡರ್​ ಯುವರಾಜ್​ ಸಿಂಗ್​ ಮಾರ್ಚ್​ 7ರಿಂದ 18ರವರೆಗೆ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಲೆಜೆಂಡ್ಸ್​ ಕ್ರಿಕೆಟ್​ ಟ್ರೋಫಿ (ಎಲ್​ಸಿಟಿ) ಟೂರ್ನಿಯ 2ನೇ ಆವೃತ್ತಿಯಲ್ಲಿ ನ್ಯೂಯಾರ್ಕ್​ ಸೂಪರ್​ಸ್ಟಾರ್​ ಸ್ಟ್ರೈಕರ್ಸ್​ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ತಂಡದ ಐಕಾನ್​ ಆಟಗಾರರೂ ಆಗಿರುತ್ತಾರೆ.

ಕಳೆದ ವರ್ಷ ಗಾಜಿಯಾಬಾದ್​ನಲ್ಲಿ ಟೂರ್ನಿಯ ಮೊದಲ ಆವೃತ್ತಿ ಟಿ20 ಕ್ರಿಕೆಟ್​ ಪ್ರಕಾರದಲ್ಲಿ ನಡೆದಿದ್ದರೆ, ಈ ಬಾರಿ "90 ಬಾಲ್ಸ್​' ಎಂಬ ಹೊಸ ಪ್ರಕಾರದಲ್ಲಿ ನಡೆಯಲಿದೆ. ಇದರಲ್ಲಿ ಪಂದ್ಯವೊಂದರಲ್ಲಿ ಒಂದು ತಂಡದಿಂದ ಐವರು ಬೌಲರ್​ಗಳು ತಲಾ 3 ಓವರ್​ ಎಸೆಯಬಹುದು. ಆದರೆ 60ನೇ ಎಸೆತದ ನಂತರದಲ್ಲಿ ಬೌಲಿಂಗ್​ ತಂಡದ ನಾಯಕನಿಗೆ, ಒಬ್ಬ ಬೌಲರ್​ನಿಂದ 4ನೇ ಓವರ್​ ಬೌಲಿಂಗ್​ ಮಾಡಿಸುವ ಆಯ್ಕೆಯನ್ನೂ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net