ಆತನ ದೇಹ ಸಾಥ್​ ಕೊಡ್ತಿಲ್ಲ! ಹೆಡ್​ ಕೋಚ್​ ಗೌತಮ್ ಗಂಭೀರ್​ಗೆ ವಾರ್ನಿಂಗ್ ಕೊಟ್ಟ ಮಾಜಿ ಕ್ರಿಕೆಟಿಗ | Team India

ವಿಜಯವಾಣಿ - 2025-01-27T111056.440
Published on

Team India: ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಿಂದ ಟೀಮ್ ಇಂಡಿಯಾ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇಂಜುರಿಯಿಂದ ಹೊರಗುಳಿದಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಸರಣಿಯ ಮೊದಲ ಪಂದ್ಯದ ಸಮಯದಲ್ಲಿ ಇಂಜುರಿಗೆ ಒಳಗಾದ ರೆಡ್ಡಿ, ಎರಡನೇ ಪಂದ್ಯದಲ್ಲಿ ಸ್ಪರ್ಧಿಸಲಿಲ್ಲ. ಸದ್ಯ ಇದೇ ವಿಷಯಕ್ಕೆ ಭಾರತದ ಹೆಡ್​ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಹಿರಿಯ ಕ್ರಿಕೆಟಿಗ ಆಕಾಶ್​ ಚೋಪ್ರಾ ಕಿಡಿಕಾರಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​-ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಐದೂ ಪಂದ್ಯಗಳನ್ನಾಡಿದ ನಿತೀಶ್​ ಕುಮಾರ್​ ರೆಡ್ಡಿ, ನಾಲ್ಕನೇ ಮ್ಯಾಚ್​ನಲ್ಲಿ ಶತಕ ಬಾರಿಸಿ, ಎಲ್ಲರ ಗಮನಸೆಳೆದರು. "ಐದಕ್ಕೆ ಐದೂ ಪಂದ್ಯಗಳಲ್ಲಿ ತಂಡದ ಪರ ಆಡಿರುವ ನಿತೀಶ್​ರನ್ನು ಸದ್ಯ ಇಂಗ್ಲೆಂಡ್​ ವಿರುದ್ಧದ ಸರಣಿಯಿಂದ ಹೊರಗಿಡಲಾಗಿದೆ. ನೀವು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವಾಗ ಹೆಚ್ಚಿನ ಹೊರೆ ಇರುತ್ತದೆ. ಅದು ಅಷ್ಟು ಸುಲಭವಲ್ಲ. ಹೀಗಿರುವಾಗ ಅವರನ್ನು ತಂಡದಲ್ಲಿ ಆಡಿಸುವುದು ಅಷ್ಟು ಸರಿಯಲ್ಲ" ಎಂದು ಚೋಪ್ರಾ ಹೇಳಿದ್ದಾರೆ.

"ಆಸ್ಟ್ರೇಲಿಯಾದಲ್ಲಿ ಐದು ಟೆಸ್ಟ್‌ಗಳನ್ನು ಆಡಿದ ನಿತೀಶ್​ ರೆಡ್ಡಿ ದೇಹದ ಮೇಲೆ ಪರಿಣಾಮ ಬಿದ್ದಿದೆ. ಆತ ಯುವ ಕ್ರಿಕೆಟಿಗ ಮತ್ತು ನೀವು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹೊಸಬರಾದಾಗ ದೇಹ ಅಷ್ಟಾಗಿ ಸಾಥ್ ನೀಡೋದಿಲ್ಲ. ಬ್ಯಾಕ್​ ಟು ಬ್ಯಾಕ್​ ಆಡಿದ ಕಾರಣ ನಿತೀಶ್​ಗೆ ಇಂಗ್ಲೆಂಡ್​ ವಿರುದ್ಧ ಆಡಲು ಕಷ್ಟವಾಯಿತು" ಎಂದರು. ಇಂಜುರಿಯಿಂದ ಹೊರಗುಳಿದಿರುವ ನಿತೀಶ್​ ರೆಡ್ಡಿ ಜಾಗಕ್ಕೆ ಶಿವಂ ದುಬೆರನ್ನು ಕರೆತರಲಾಗಿದೆ. ಪ್ರಸ್ತುತ ಎರಡು ಪಂದ್ಯಗಳನ್ನಾಡಿರುವ ಮೆನ್ ಇನ್ ಬ್ಲೂ ತಂಡ ಇಂಗ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಜನವರಿ 28ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net