ಫೆ.2ಕ್ಕೆ ಮಲ್ಲೇಶ್ವರದಲ್ಲಿ ಬೆಂಗಳೂರು ಉತ್ಸವ: ಯೋಗ, ಡಾನ್ಸ್, ಸೇರಿ ವಿವಿಧ ಕಾರ್ಯಕ್ರಮ, ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಆಯೋಜನೆ | Bengaluru Utsava

Bengaluru Utsava
Published on

Bengaluru Utsava : ವಿವಿಧ ಬಡಾವಣೆಗಳಲ್ಲಿ ಮಾಹಿತಿ-ಮನರಂಜನೆ-ಸಾಂಸ್ಕೃತಿಕ ಹಿರಿಮೆ ಸಾರುವ ವಿನೂತನ ಪರಿಕಲ್ಪನೆಯೇ ಬೆಂಗಳೂರು ಉತ್ಸವ. ಇದು ನಮ್ಮ ಏರಿಯಾದ ಬೀದಿಗಳಲ್ಲಿ ನಡೆಯುವ ನಮ್ಮ ಹಬ್ಬ. ವಿಜಯವಾಣಿ ಫೆ.2ರಂದು ಮಲ್ಲೇಶ್ವರಂನಲ್ಲಿ 'ಬೆಂಗಳೂರು ಉತ್ಸವ' ಆಯೋಜಿಸಿದೆ. ಬಿಬಿಎಂಪಿ, ಪೊಲೀಸ್‌ ಇಲಾಖೆ ಸಹಕಾರವಿರುವ ಉತ್ಸವದಲ್ಲಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ನಟ-ನಟಿಯರು ಪಾಲ್ಗೊಳ್ಳಲಿದ್ದಾರೆ. ಮನೆ-ಮಂದಿಯೊಂದಿಗೆ ನೀವೂ ಬಂದು ಸಂಭ್ರಮಿಸಿ.

ಮನರಂಜನೆಯೊಂದಿಗೆ ಸಾಂಸ್ಕೃತಿಕ ಹಿರಿಮೆ ಗರಿಮೆ ಸಾರುವ ವಿನೂತನ ಪರಿಕಲ್ಪನೆಯೊಂದಿಗೆ ಕನ್ನಡದ ನಂ.1. ದಿನಪತ್ರಿಕೆ ವಿಜಯವಾಣಿ 'ಬೆಂಗಳೂರು ಉತ್ಸವ' ಆಯೋಜಿಸುತ್ತಿದ್ದು, ಬನ್ನಿ ಮನದಣಿಯೆ ಆಟ ಆಡಿ, ಮಸ್ತ್ ಮಜಾ ಮಾಡಿ...

ಫೆ. 2ರಂದು (ಭಾನು ವಾರ) ಮಲ್ಲೇಶ್ವರಂನ ಸಂಪಿಗೆ ರಸ್ತೆ 8ನೇ ಕ್ರಾಸ್​​ನಲ್ಲಿ ನಮ್ಮ ಬೀದಿ ನಮ್ಮ ಉತ್ಸವ ಶೀರ್ಷಿಕೆಯಡಿ 'ಬೆಂಗಳೂರು ಉತ್ಸವ'ಕ್ಕೆ ವೇದಿಕೆ ಸಜ್ಜಾಗುತ್ತಿದೆ. ಅಂದು ಬೇರೆ ಬೇರೆ ಕಾರ್ಯಕ್ರಮಗಳು ಆಯೋಜನೆಯಾಗಿದ್ದು, 'ನಮ್ಮೋರು ನಮ್ ಏರಿಯಾದವರ ಜತೆ ಸಂಭ್ರಮಿಸುವ ಸಾಂಸ್ಕೃತಿಕ ಹಬ್ಬ' ಇದಾಗಿದ್ದು, ಮಧ್ಯಾಹ್ನ 12 ಗಂಟೆಯವರೆಗೆ ಉತ್ಸವ ಮುಂದುವರಿಯಲಿದೆ.

ವಿಜಯಾನಂದ ಟ್ರಾವೆಲ್ಸ್, ಸುದರ್ಶನ್ ಸಿಲ್ಕ್, ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿ., ಶ್ರೀನಿಧಿ ಸಿಲ್ಸ್, ಸಪ್ನಾ ಬುಕ್‌ಹೌಸ್ ಹಾಗೂ ನಂದಿನಿ ಪ್ರಾಯೋಜಕತ್ವದಲ್ಲಿ ಉತ್ಸವ ನಡೆಯಲಿದೆ. ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಸೇರಿ ವಿವಿಧ ಕ್ಷೇತ್ರದ ಗಣ್ಯರು ಬೆಂಗಳೂರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ಏನೆಲ್ಲ ಇರಲಿದೆ?

ಯೋಗ, ಜುಂಬಾ, ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಬುಲೆಟ್ ಯಾಲಿ, ಅಪ್ಪಟ ಕನ್ನಡದಲ್ಲಿ ಒಂದು ನಿಮಿಷದ ಮಾತು, ನೃತ್ಯ, ಬೀಟ್ ಬಾಕ್ಸಿಂಗ್ ಮತ್ತು ಡಿಜೆ, ಜಾನಪದ ತಂಡಗಳಿಂದ ಕಲಾ ಪ್ರದರ್ಶನ, ಜಾದೂ ಪ್ರದರ್ಶನ, ಗಾಯನ, ವ್ಯಂಗ್ಯಚಿತ್ರ ಮತ್ತು ಕುಂಬಾರಿಕೆ, ಸಾಮಾನ್ಯ ಜ್ಞಾನ ಸ್ಪರ್ಧೆ, ಮಂದಗತಿಯ ಸೈಕಲ್ ಚಾಲನೆ, ಚಮಚ ಮತ್ತು ನಿಂಬೆಹಣ್ಣು ಸ್ಪರ್ಧೆ, ಗಿಲ್ಲಿ ದಾಂಡು, ಕುಂಟಾಬಿಲ್ಲೆ, ಕೇರಂ, ಬುಗುರಿ, ಚದುರಂಗ ಸ್ಪರ್ಧೆ, ಬ್ಯಾಡ್ಮಿಂಟನ್, ಛದ್ಮವೇಷ ಸ್ಪರ್ಧೆ, ಹಗ್ಗಜಗ್ಗಾಟ ಸ್ಪರ್ಧೆ, ಲಗೋರಿ ಸೇರಿ ಎಲ್ಲ ವಯೋಮಾನದ ವರಿಗೂ ಆಟಗಳು ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಪ್ರವೇಶ ಉಚಿತ

ಬೆಂಗಳೂರು ಉತ್ಸವದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಭಾಗವಹಿಸಬಹುದು. ಉಚಿತ ಪ್ರವೇಶ ಇರಲಿದೆ. ಮನೆ ಮಂದಿಯೊಂದಿಗೆ ಉತ್ಸವಕ್ಕೆ ಬಂದು ಮನಸಾರೆ ಸಂಭ್ರಮಿಸಬಹುದು

ಹೆಸರು ನೋಂದಾಯಿಸಿ..

ರಂಗೋಲಿ ಸ್ಪರ್ಧೆ, ಹಗ್ಗಜಗ್ಗಾಟ, ಚಿತ್ರ ಬಿಡಿಸುವ ಸ್ಪರ್ಧೆ, ಕ್ವಿಜ್, ಸ್ಟೋ ಸೈಕ್ಲಿಂಗ್ ಸೇರಿ ಕೆಲವೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆಕರ್ಷಕ ಬಹುಮಾನ ಇರಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಸರು ನೋಂದಣಿ ಮಾಡಿಕೊಳ್ಳಬಹುದು. ಮೊದಲು ಹೆಸರು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಯಾವಾಗ?

ಫೆ.2, ಭಾನುವಾರ

ಸಮಯ ಬೆಳಗ್ಗೆ 8ರಿಂದ 12 ಗಂಟೆಯವರೆಗೆ

ಎಲ್ಲಿ?

ಸಂಪಿಗೆ ರಸ್ತೆ 8ನೇ ಕ್ರಾಸ್ ಮಲ್ಲೇಶ್ವರ

ಹೆಚ್ಚಿನ ವಿವರಕ್ಕೆ 88844 31933 88844 32485 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net