73 ದಿನ ಏರ್‌ಪೋರ್ಟ್‌ನಲ್ಲೇ ಬಂಧಿಯಾಗಿದ್ದ ಫುಟ್‌ಬಾಲ್ ಆಟಗಾರ

Muller_WEB
Published on

ಮುಂಬೈ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಆತ ನಿಗದಿತ ವೇಳೆಗೆ ತವರಿಗೆ ಮರಳಬೇಕಿತ್ತು. ಆದರೆ, ಆಗಿದ್ದೇ ಬೇರೆ. ಮಾರ್ಚ್ ಮಧ್ಯದಲ್ಲಿ ಕೇರಳದಲ್ಲಿ ಫುಟ್‌ಬಾಲ್ ಟೂರ್ನಿಯಲ್ಲಿ ಭಾಗವಹಿಸಿ, ಸಹ ಆಟಗಾರರಿಗೆ ಗುಡ್‌ಬೈ ಹೇಳಿ ಬಂದ ಘಾನ ದೇಶದ ಆಟಗಾರ ಮುಂಬೈ ಮೂಲಕ ವಿಮಾನದಲ್ಲಿ ತವರಿಗೆ ಮರಳಲು ಬಯಸಿದ್ದ. ಆದರೆ, ಅಷ್ಟೊತ್ತಿಗಾಗಲೇ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಅನಿವಾರ್ಯವಾಗಿ ಏರ್ ಪೋರ್ಟ್‌ನಲ್ಲೇ ದಿನದೂಡಬೇಕಾಯಿತು. ಅದು ಬರೋಬ್ಬರಿ 73 ದಿನ...

ಕೇರಳ ಪ್ರಸಿದ್ಧ ಟೂರ್ನಿ 7 ಎ ಸೈಡ್ (ಎರಡು ತಂಡದಲೂ ತಲಾ 7 ಆಟಗಾರರು) ಟೂರ್ನಿ ಒಆರ್‌ಪಿಸಿ ಕೇಚೇರಿ ತಂಡದ ಪರ ಆಡಲು ತ್ರಿಶೂರ್ ಘಾನಾ ದೇಶದ ರ‌್ಯಾಂಡಿ ಜಾನ್ ಮುಲ್ಲರ್ ಆಗಮಿಸಿದ್ದರು. ಕರೊನಾ ಭೀತಿಯಿಂದಾಗಿ ಟೂರ್ನಿ ಅರ್ಧಕ್ಕೆ ಮೊಟಕುಗೊಂಡ ಹಿನ್ನೆಲೆಯಲ್ಲಿ ರೈಲಿನ ಮೂಲಕ ಮುಂಬೈಗೆ ಆಗಮಿಸಿದರು. ಆದರೆ, ವಿಮಾನ ರದ್ದಾಗಿದ್ದರಿಂದ ಗಾಬರಿಗೊಂಡ ಜಾನ್, ಸ್ಥಳೀಯ ಪೊಲೀಸರು ಹಾಗೂ ಏರ್ಪೋರ್ಟ್ ಪ್ರಾಧಿಕಾರದ ಅಧಿಕಾರಗಳ ಸಹಾಯದೊಂದಿಗೆ ಟರ್ಮಿನಲ್‌ನಲ್ಲೇ ವಾಸ ಮಾಡಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಇದ್ದದು ಕೇವಲ ಸಾವಿರ ರೂಪಾಯಿಯಂತೆ. ಹೀಗೆ ಸ್ಥಳೀಯರು ನೀಡುತ್ತಿದ್ದ ಸ್‌ಟಾ ಡ್ರಿಂಕ್ಸ್, ರೊಟ್ಟಿ, ಬಿಸ್ಕತ್ ತಿಂದು ದಿನದೂಡಿದ್ದಾರೆ.

ಈ ವೇಳೆ ಹಿಂದಿ ಸಿನಿಮಾ ವೀಕ್ಷಿಸುವುದೇ ಅವರ ಕಾಯವಾಗಿದ್ದಂತೆ. ‘ಮನೆಯವ್ರಿಗೆ 20 ದಿನ ಫೋನ್ ಸಂಪರ್ಕ ಸಿಕ್ಕಿರಲಿಲ್ಲ. ಬಳಿಕ ಫೋನ್ ಮಾಡಿದರೆ, ನಾನು ಸತ್ತು ಹೋಗಿದ್ದೆ ಎಂದು ಭಾವಿಸಿದ್ದರಂತೆ’ ಎಂದು ಭಾವುಕರಾಗುತ್ತಾರೆ ಜಾನ್. ಸ್ಥಳೀಯರು ತುಂಬಾ ಸಹಾಯ ಮಾಡಿದರೂ ಅವರ ಸ್ನೇಹವನ್ನು ಎಂದೂ ಮರೆಯಲಾರೆ ಎನ್ನುತ್ತಾರೆ. ಇದೀಗ ಮಹಾರಾಷ್ಟ್ರ ಸರ್ಕಾರದ ಸಂಪರ್ಕ ಸಾಧಿಸಿರುವ ಘಾನಾ ರಾಯಭಾರಿ ಕಚೇರಿ, ವಿಮಾನಯಾನ ಆರಂಭಗೊಂಡರೆ ಮೊದಲ ವಿಮಾನದಲ್ಲೇ ಜಾನ್‌ರನ್ನು ಸ್ವದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸ್ಥಳೀಯ ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net