ಸಚಿನ್ ಹೊಗಳಿಕೆಯಿಂದ ಪುಳಕಗೊಂಡ ನಟಿ

SAIYAMI-web
Published on

ಬೆಂಗಳೂರು: ಕ್ರಿಕೆಟ್‌ಗೂ ಸಿನಿಮಾ ಕ್ಷೇತ್ರಕ್ಕೂ ಎಲ್ಲಿಲ್ಲದ ನಂಟು. ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ನಟ-ನಟಿಯರು ಆಗಮಿಸುವುದು ಮಾಮೂಲಿ. ಅದೇ ರೀತಿ ಕೆಲವೊಂದು ಕ್ರಿಕೆಟಿಗರೂ ಕೂಡ ಸಿನಿಮಾ ಪ್ರೊಮೊಷನ್ಸ್‌ಗಳಲ್ಲಿ ಭಾಗಿಯಾಗುತ್ತಾರೆ. ಆದರೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಿನಿಮಾ ಕುರಿತು ಮಾತನಾಡುವುದೇ ಕಡಿಮೆ. ಬಾಲಿವುಡ್ ನಟಿಯ ಚಿತ್ರವೊಂದಕ್ಕೆ ಸಚಿನ್ ತೆಂಡುಲ್ಕರ್ ಮನಸೋತಿದ್ದಾರೆ. ಸಚಿನ್ ಹೊಗಳಿಕೆಯಿಂದ ಪುಳಗೊಂಡಿರುವ ನಟಿ, ಖೇಲ್ ರತ್ನ ಪ್ರಶಸ್ತಿ ಸಿಕ್ಕಷ್ಟೇ ಖುಷಿಯಾಗುತ್ತಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ಸಯಾಮಿ ಖೇರ್ ನಟನೆಯ ‘ಚೋಕ್ಡ-ಪೈಸಾ ಬೋಲ್ತಾ ಹೈ’ ಸಿನಿಮಾ ಮೂರು ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿತ್ತು. ಹಿಂದಿ ಭಾಷೆಯ ನಾಟಕ ಚಿತ್ರವಾಗಿದ್ದು, ಬಾಲಿವುಡ್ ಅಂಗಳದಲ್ಲಿ ಭಾರೀ ಸದ್ದುಮಾಡುತ್ತಿದೆ. ಜತೆಗೆ ದಿಗ್ಗಜ ಸಚಿನ್ ಅವರ ಮನಸ್ಸನ್ನು ಕದ್ದಿದೆ ಈ ಸಿನಿಮಾ. ನಟಿ ಸಯಾಮಿ ಖೇರ್ ನಟನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿನ್, ‘ನೀನು ಕೇವಲ ನಟಿಸಲಾರೆ, ಬ್ಯಾಟ್ ಕೂಡ ಮಾಡುವೆ. ನಿನ್ನ ನಟನೆ ಇಷ್ಟವಾಯಿತು’ ಎಂದು ಸಚಿನ್ ಬರೆದಿದ್ದಾರೆ. ಸಚಿನ್ ಮೆಚ್ಚುಗೆಯಿಂದ ಪುಳಕಗೊಂಡ ಸಯಾಮಿ, ತುಂಬಾ ಧನ್ಯವಾದಗಳು ನನಗೆ ಖೇಲ್ ರತ್ನ ಹಾಗೂ ಅಸ್ಕರ್ ಪ್ರಶಸ್ತಿ ಸಿಕ್ಕಷ್ಟೇ ಖುಷಿಯಾಗುತ್ತಿದೆ ಎಂದಿದ್ದಾರೆ.

ಸಯಾಮಿ ಕೇವಲ ನಟನೆ ಅಲ್ಲದೇ ಕ್ರಿಕೆಟ್ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದಾರೆ. ಈಕೆಯ ಕ್ರಿಕೆಟ್ ಜ್ಞಾನದ ಕುರಿತು ಸ್ವತಃ ಸೌರವ್ ಗಂಗೂಲಿಯೇ ಅಚ್ಚರಿ ವ್ಯಕ್ತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net