ಹೊರಗಿನಿಂದ ಫುಡ್​ ಸಪ್ಲೈ; ನಿಯಮ ಗಾಳಿಗೆ ತೂರಿದ್ರಾ ಕೊಹ್ಲಿ?: ಹಾರ್ದಿಕ್​, ಅಯ್ಯರ್​ ಸಿಬ್ಬಂದಿಗೂ ಎಚ್ಚರಿಸಿದ BCCI

dk - 2025-02-17T190039.144
Published on

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಇತ್ತೀಚಿಗೆ ಬಿಡುಗಡೆ ಮಾಡಿರುವ ನಿಯಮಗಳನ್ನು ಮೀರಿ ತನ್ನ ಸಿಬ್ಬಂದಿಯಿಂದ(ಮ್ಯಾನೇಜರ್​) ಹೊರಗಿನ ಊಟ(ಫುಡ್​ ಸಪ್ಲೈ) ತರಿಸಿಕೊಂಡಿದ್ದು, ನಿಯಮಗಳ ಉಲ್ಲಂಘನೆ ಮಾಡಿದ್ರಾ ವಿರಾಟ್​ ಕೊಹ್ಲಿ? ಎಂಬ ಪ್ರಶ್ನೆ ಇದೀಗ ಮೂಡಿದೆ.

ಹೌದು, ಕಳೆದ ಕೆಲ ದಿನಗಳಿಂದೆ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾದ ಕಳಪೆ ಪ್ರದರ್ಶನ ಹಿನ್ನೆಲೆ, ಆಟಗಾರರಿಗೆ ಪ್ರವಾಸಗಳ ಸಂದರ್ಭದಲ್ಲಿ ಪತ್ನಿಯರನ್ನು ಕರೆದೊಯ್ಯಬಾರದು ಎಂಬ ನಿಯಮ ಸೇರಿದಂತೆ ಕೆಲ ಕಠಿಣ ನಿರ್ಧಾರಗಳನ್ನು ಬಿಸಿಸಿಐ ಜಾರಿ ಮಾಡಿದೆ. ಅದರಲ್ಲಿ 'ವೈಯಕ್ತಿಕ ಅಡುಗೆದಾರರು ಬೇಡ' ಎಂಬ ನಿಯಮವಿದೆ. ಆದರೆ, ದುಬೈನಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ 2025ರ ಪ್ರವಾಸದ ವೇಳೆ ವಿರಾಟ್​ಗೆ​ ಇದೀಗ ತಮ್ಮ ಲೋಕಲ್​ ಮ್ಯಾನೇಜರ್​ ಹೊರಗಿನಿಂದ ಕವರ್​ವೊಂದನ್ನು ತಂದುಕೊಟ್ಟಿದೆ. ಅದರಲ್ಲಿ ಆಹಾರ ಇರುವುದು ಗೊತ್ತಾಗಿದೆ. ಹೀಗಾಗಿ,ವಿರಾಟ್​ ಹೊರಗಿನಿಂದ ಊಟ ತರಿಸಿಕೊಳ್ಳುವ ಮೂಲಕ ಬಿಸಿಸಿಐ ಕೆಂಗಂಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಇತರರ ಆಟಗಾರರಾದ ಹಾರ್ದಿಕ್​ ಪಾಂಡ್ಯ ಮತ್ತು ಶ್ರೇಯಸ್​​ ಅಯ್ಯರ್ ಅವರಿಗೆ ಸಹಾಯ ಮಾಡಲು ಮುಂದಾದ​ ಸಿಬ್ಬಂದಿಗಳ ಮೇಲೆ ಕೂಡ ಬಿಸಿಸಿಐ ಕಿಡಿ ಕಾರಿದೆ.

ಭಾರತ ತಂಡವು ಭಾನುವಾರ ದುಬೈನ ಐಸಿಸಿ ಅಕಾಡೆಮಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಅವಧಿಯನ್ನು ಪ್ರಾರಂಭಿಸಿತು. ರೋಹಿತ್ ಶರ್ಮಾ ನೇತೃತ್ವದ ತಂಡವು ಗುರುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ತನ್ನ ಗ್ರೂಪ್ ಎ ಪಂದ್ಯದಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ, ನಂತರ ಅದೇ ಸ್ಥಳದಲ್ಲಿ ಪಾಕಿಸ್ತಾನ ವಿರುದ್ಧದ ರೋಮಾಂಚಕಾರಿ ಪಂದ್ಯ ನಡೆಯಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net