

ಪ್ಯಾರಿಸ್: ಸಿಟಿ ಆಫ್ ಲವ್ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್ ಆತಿಥ್ಯದಲ್ಲಿ ಜುಲೈ 26ರಿಂದ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದ್ದು, 33ನೇ ಆವೃತ್ತಿಯ ಕ್ರೀಡಾಕೂಟವು ಒಂದಿಲ್ಲೊಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್ನಲ್ಲಿ 206 ದೇಶಗಳ 14,250 ಕ್ರೀಡಾಪಟುಗಳು ಭಾಗಿಯಾಗುತ್ತಿದ್ದು, ಇದೀಗ ಆಸ್ಟ್ರೇಲಿಯಾ ಮೂಲದ ಐವರು ಆಟಗಾರ್ತಿಯರು ಕೋವಿಡ್ಗೆ ತುತ್ತಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಆಸ್ಟ್ರೇಲಿಯಾದ ವಾಟರ್ ಪೋಲೋ ತಂಡದ ಐವರು ಆಟಗಾರ್ತಿಯರು ಕೋವಿಡ್ಗೆ ತುತ್ತಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಇವರನ್ನು ವಿಶೇಷವಾಗಿ ಆರೈಕೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಒಲಿಂಪಿಕ್ ತಂಡದ ಮುಖ್ಯಸ್ಥ ಅನ್ನಾ ಮೀರೆಸ್, ಒಟ್ಟು ಐವರು ಅಥ್ಲೀಟ್ಗಳು ಕೋವಿಡ್ಗೆ ತುತ್ತಾಗಿದ್ದು, ಎಲ್ಲರಿಗೂ ಚಿಕಿತ್ಸೆ ಕೊಡಲಾಗುತ್ತಿದೆ. ಈಗಾಗಲೇ ಈ ಐವರು ಆಟಗಾರರು ಚೇತರಿಸಿಕೊಂಡಿದ್ದು, ತರಬೇತಿಯಲ್ಲಿ ಭಾಗಿಯಾಗಲಿದ್ದಾರೆ. ವಾಟರ್ ಪೋಲೋ ತಂಡದಲ್ಲಿರುವ ಇತರೆ ಆಟಗಾರರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.