ಏಕದಿನ ಪಂದ್ಯವೊಂದರಲ್ಲಿ 4 ಶತಕ; ವಿಶ್ವಕಪ್​ನಲ್ಲಿ ಇದೇ ಮೊದಲು!

4 century web
Published on

ಹೈದರಾಬಾದ್​: ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಣ ಆಫ್ರಿಕಾದ ಮೂವರು ಬ್ಯಾಟರ್​ಗಳು ಶತಕ ಸಿಡಿಸಿದ್ದರು. ವಿಶ್ವಕಪ್​ನಲ್ಲಿ ಇದೇ ಮೊದಲ ದೃಷ್ಟಾಂತವಾಗಿತ್ತು. ಇದೀಗ ಪಾಕಿಸ್ತಾನ-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಒಟ್ಟು 4 ಶತಕಗಳು ಸಿಡಿದಿದ್ದು, ಇದು ಕೂಡ ಏಕದಿನ ವಿಶ್ವಕಪ್​ನಲ್ಲಿ ಮೊದಲ ದೃಷ್ಟಾಂತವೆನಿಸಿದೆ.

ಒಟ್ಟಾರೆ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಕೇವಲ 3ನೇ ಬಾರಿ ಒಂದೇ ಪಂದ್ಯದಲ್ಲಿ 4 ಶತಕಗಳು ದಾಖಲಾದವು. ಈ ಮುನ್ನ 1998ರಲ್ಲಿ ಪಾಕ್​-ಆಸೀಸ್​, 2013ರಲ್ಲಿ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತ-ಆಸೀಸ್​ ಪಂದ್ಯದಲ್ಲಿ ತಲಾ 4 ಶತಕಗಳು ಸಿಡಿದಿದ್ದವು. ಆಗ ಭಾರತ ಪರ ಶಿಖರ್​ ಧವನ್​, ವಿರಾಟ್​ ಕೊಹ್ಲಿ ಮತ್ತು ಆಸೀಸ್​ ಪರ ಜಾರ್ಜ್​ ಬೈಲಿ, ಶೇನ್​ ವ್ಯಾಟ್ಸನ್​ ಶತಕ ಸಿಡಿಸಿದ್ದರು.

ಹೈದರಾಬಾದ್​ನಲ್ಲಿ ನಡೆದ ವಿಶ್ವಕಪ್​ ಪಂದ್ಯದಲ್ಲಿ ಪಾಕ್​ ಪರ ವಿಕೆಟ್​ ಕೀಪರ್-ಬ್ಯಾಟರ್​ ಮೊಹಮದ್​ ರಿಜ್ವಾನ್​ (131* ರನ್​, 121 ಎಸೆತ, 8 ಬೌಂಡರಿ, 3 ಸಿಕ್ಸರ್​) ಹಾಗೂ ಯುವ ಬ್ಯಾಟರ್​ ಅಬ್ದುಲ್ಲಾ ಶಫೀಕ್​ (113 ರನ್​, 103 ಎಸೆತ, 10 ಬೌಂಡರಿ, 3 ಸಿಕ್ಸರ್​) ಶತಕ ಸಿಡಿಸಿದರು. ಇದಕ್ಕೆ ಮುನ್ನ ಶ್ರೀಲಂಕಾ ಪರ ಕುಸಲ್​ ಮೆಂಡಿಸ್​ (122 ರನ್​, 77 ಎಸೆತ, 14 ಬೌಂಡರಿ, 6 ಸಿಕ್ಸರ್​) ಮತ್ತು ಸಧೀರ ಸಮರವಿಕ್ರಮ (108 ರನ್​, 89 ಎಸೆತ, 11 ಬೌಂಡರಿ, 2 ಸಿಕ್ಸರ್​) ಶತಕ ಬಾರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net