

ಪೊಚೆಫ್ಸ್ಟೋಮ್: ಕನ್ನಡಿಗ ಪ್ರಸಿದ್ಧ ಕೃಷ್ಣ (43ಕ್ಕೆ 5) ಹ್ಯಾಟ್ರಿಕ್ ವಿಕೆಟ್ ಸಾಧನೆಯ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ಎ ತಂಡಕ್ಕೆ ಕಡಿವಾಣ ಹೇರಿದ ಭಾರತ ಎ ತಂಡ ಬಳಿಕ ಒಡಿಶಾ ಯುವ ಬ್ಯಾಟರ್ ಪ್ರದೋಶ್ ರಂಜನ್ ಪಾಲ್ (163 ರನ್, 209 ಎಸೆತ, 23 ಬೌಂಡರಿ, 1 ಸಿಕ್ಸರ್) ಭರ್ಜರಿ ಶತಕದ ನೆರವಿನಿಂದ ಮೊದಲ ಚತುರ್ದಿನ ಟೆಸ್ಟ್ನಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಬುಧವಾರ 5 ವಿಕೆಟ್ಗೆ 298 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಎ, ಪ್ರಸಿದ್ಧ ಕೃಷ್ಣ ಮಾರಕ ದಾಳಿಗೆ ಕುಸಿದು 319 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ ಎ ತಂಡ 6 ವಿಕೆಟ್ಗೆ 377 ರನ್ ಪೇರಿಸಿ 58 ರನ್ ಮುನ್ನಡೆ ಸಾಧಿಸಿದೆ. ಪ್ರಸಿದ್ಧ ಕೃಷ್ಣ ವಿದೇಶಿ ಪ್ರಥಮ ದರ್ಜೆ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 6ನೇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನಿಸಿದರು.
ದಕ್ಷಿಣ ಆಫ್ರಿಕಾ ಎ: 98.1 ಓವರ್ಗಳಲ್ಲಿ 319 (ಜೀನ್ ಡು ಪ್ಲೆಸಿಸ್ 106, ಪ್ರಸಿದ್ಧ ಕೃಷ್ಣ 43ಕ್ಕೆ 5, ಸೌರಭ್ 83ಕ್ಕೆ 3). ಭಾರತ ಎ: 77.2 ಓವರ್ಗಳಲ್ಲಿ 6 ವಿಕೆಟ್ಗೆ 377 (ಪಡಿಕಲ್ 30, ಪ್ರದೋಶ್ 163, ಸ್ರಾರ್ಜ್ 68, ಶಾರ್ದೂಲ್ 70*, ಬೋಷ್ 46ಕ್ಕೆ 2, ಜೋನ್ಸ್ 83ಕ್ಕೆ 2).