ಕಿರಿಯರ ಕ್ರಿಕೆಟ್​ ವಿಶ್ವಕಪ್​ ತಂಡದಲ್ಲಿ ರಾಜ್ಯದ ಧನುಷ್​ ಗೌಡ

dhanush web
Published on

ಬೆಂಗಳೂರು: ಮುಂದಿನ ವರ್ಷ ಜನವರಿಯಲ್ಲಿ ದಣ ಆಫ್ರಿಕಾದಲ್ಲಿ ನಡೆಯಲಿರುವ 19 ವಯೋಮಿತಿಯ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ ಹಾಗೂ ಡಿಸೆಂಬರ್​ ಅಂತ್ಯದಲ್ಲಿ ಆರಂಭವಾಗಲಿರುವ ತ್ರಿಕೋನ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದ ವೇಗಿ ಧನುಷ್​ ಗೌಡ ಸ್ಥಾನ ಪಡೆದಿದ್ದಾರೆ.

ಉದಯೋನ್ಮುಖ ಬ್ಯಾಟರ್​ ಪಂಜಾಬ್​ನ ಉದಯ್​ ಸಹರಾನ್​ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಸ್ತುತ ಏಷ್ಯಾಕಪ್​ನಲ್ಲಿ ಕಣಕ್ಕಿಳಿದಿರುವ ಆಟಗಾರರು ವಿಶ್ವಕಪ್​ನಲ್ಲಿ ಆಡಲಿದ್ದಾರೆ. ಜನವರಿ 20ರಂದು ಬಾಂಗ್ಲಾದೇಶವನ್ನು ಎದುರಿಸುವ ಮೂಲಕ ಐದು ಬಾರಿಯ ಚಾಂಪಿಯನ್​ ಭಾರತ ಅಭಿಯಾನ ಆರಂಭಿಸಲಿದೆ.

ಮಧ್ಯಮ ವೇಗಿ ಧನುಷ್​ ಗೌಡ ಬೆಂಗಳೂರಿನ ರೇವಾ ಯುನಿವರ್ಸಿಟಿಯ ಬಿ.ಕಾಮ್​ 3ನೇ ಸೆಮಿಸ್ಟರ್​ ವಿದ್ಯಾರ್ಥಿಯಾಗಿದ್ದಾರೆ. ಹಾಲಿ ಕಿರಿಯರ ಏಷ್ಯಾಕಪ್​ ತಂಡದಲ್ಲೂ ಇದ್ದಾರೆ. ಕಿರಿಯರ ವಿಶ್ವಕಪ್​ ಜನವರಿ 19ರಿಂದ ಫೆಬ್ರವರಿ 11ರವರೆಗೆ ನಡೆಯಲಿದೆ.

ತಂಡ: ಉದಯ್​ ಸಹರಾನ್​ (ನಾಯಕ), ಸೌಮಿ ಕುಮಾರ್​ ಪಾಂಡೆ (ಉಪನಾಯಕ), ಅರ್ಶಿನ್​ ಕುಲಕರ್ಣಿ, ಆದರ್ಶ್​ ಸಿಂಗ್​, ರುದ್ರ ಮಯೂರ್​ ಪಟೇಲ್​, ಸಚಿನ್​ ದಾಸ್​, ಪ್ರಿಯಾಂಶು ಮೊಲಿಯಾ, ಮುಶೀರ್​ ಖಾನ್​, ಮುರುಗನ್​ ಅಭಿಷೇಕ್​, ಎ.ಅವಿನಾಶ್​ ರಾವ್​ (ವಿ.ಕೀ), ಧನುಷ್​ ಗೌಡ, ಇನ್ನೇಶ್​ ಮಹಾಜನ್​ (ವಿ.ಕೀ), ಆರಾಧ್ಯ ಶುಕ್ಲಾ, ರಾಜ್​ ಲಿಂಬಾನಿ, ನಮನ್​ ತಿವಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net