ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರೀಡಾಂಗಣದಲ್ಲಿ ಅಗ್ನಿ ದುರಂತ; ಕೈಜಾರುತ್ತಾ ವಿಶ್ವಕಪ್​ ಆತಿಥ್ಯ?

eden web
Published on

ಕೋಲ್ಕತ: ಮುಂಬರುವ ಏಕದಿನ ವಿಶ್ವಕಪ್​ ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ದೇಶದ ಪ್ರಮುಖ ತಾಣಗಳಲ್ಲಿ ಒಂದಾಗಿರುವ ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ಅಗ್ನಿ ಅವಡ ಸಂಭವಿಸಿದೆ. ಆಟಗಾರರ ಡ್ರೆಸ್ಸಿಂಗ್​ ರೂಂನಲ್ಲಿ ಶಾರ್ಟ್​ ಸಕ್ಯೂಟ್​ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ದೊಡ್ಡ ಮಟ್ಟದ ನಷ್ಟ ಸಂಭವಿಸದಿದ್ದರೂ, ಡ್ರೆಸ್ಸಿಂಗ್​ ರೂಂನಲ್ಲಿದ್ದ ಆಟಗಾರರ ಕಿಟ್ಸ್​ ಮತ್ತು ಇತರ ಪರಿಕರಗಳು ಸುಟ್ಟು ಬೂದಿಯಾಗಿವೆ. ಇದರಿಂದಾಗಿ ಕ್ರೀಡಾಂಗಣದ ವಿಶ್ವಕಪ್​ ಸಿದ್ಧತೆಗೆ ಹಿನ್ನಡೆಯಾಗಿದೆ.

ವಿಶ್ವಕಪ್​ಗಾಗಿ ಕ್ರೀಡಾಂಗಣದ ನವೀಕರಣ ಕೆಲಸದಲ್ಲಿ ತೊಡಗಿಕೊಂಡಿರುವ ಸಿಬ್ಬಂದಿ, ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡ ಬೆನ್ನಲ್ಲೇ ಬಂಗಾಳ ಕ್ರಿಕೆಟ್​ ಸಂಸ್ಥೆ (ಸಿಎಬಿ) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರ ಬೆನ್ನಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇನ್ನೀಗ ವಿಶ್ವಕಪ್​ಗೆ ಮುನ್ನ ಆಟಗಾರರ ಡ್ರೆಸ್ಸಿಂಗ್​ ರೂಂ ಕೂಡ ಮತ್ತೆ ಸಜ್ಜುಗೊಳಿಸಬೇಕಾದ ಸವಾಲು ಸಿಎಬಿಗೆ ಎದುರಾಗಿದೆ.

ಈ ದುರ್ಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದೂ ಸಿಎಬಿ ತಿಳಿಸಿದೆ. ವಿಶ್ವಕಪ್​ನಲ್ಲಿ ಈಡನ್​ ಗಾರ್ಡನ್ಸ್​ ಸ್ಟೇಡಿಯಂ ಸೆಮಿಫೈನಲ್​ ಸಹಿತ ಒಟ್ಟು 5 ಪಂದ್ಯಗಳಿಗೆ ಆತಿಥ್ಯ ವಹಿಸಬೇಕಿದೆ. ಈ ಪೈಕಿ ಪಾಕಿಸ್ತಾನ ತಂಡದ 2 ಪಂದ್ಯಗಳು ಸೇರಿವೆ. ಇದಲ್ಲದೆ ಪಾಕ್​ ತಂಡ ಸೆಮಿಫೈನಲ್​ಗೇರಿದರೆ ಇಲ್ಲೇ ಆಡಲಿದೆ. ಭಾರತ ತಂಡ ಇಲ್ಲಿ ನವೆಂಬರ್​ 5ರಂದು ದಣ ಆಫ್ರಿಕಾ ವಿರುದ್ಧ ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net