2011ರಲ್ಲಿ ರಿಟೇನ್​ ಮಾಡಿಕೊಳ್ಳದ ಆರ್​ಸಿಬಿ ಬಗ್ಗೆ ರಾಬಿನ್​ ಉತ್ತಪ್ಪ ಬೇಸರ

uthappa rcb web
Published on

ಬೆಂಗಳೂರು: ಆರ್​ಸಿಬಿ ತಂಡ 2011ರಲ್ಲಿ ತನ್ನನ್ನು ರಿಟೇನ್​ ಮಾಡಿಕೊಳ್ಳದೆ ಪುಣೆ ಫ್ರಾಂಚೈಸಿಗೆ ಬಿಟ್ಟುಕೊಟ್ಟ ಬಗ್ಗೆ ಟೀಮ್​ ಇಂಡಿಯಾ ಮತ್ತು ಕರ್ನಾಟಕ ತಂಡದ ಮಾಜಿ ಬ್ಯಾಟರ್​ ರಾಬಿನ್​ ಉತ್ತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

'ನಾನು ಆರ್​ಸಿಬಿ ಪರ ಆಡುವುದನ್ನು ಆನಂದಿಸುತ್ತಿದ್ದೆ. ಹೀಗಾಗಿ ತಂಡ ಬಿಡಬೇಕಾದಾಗ ಬೇಸರವಾಗಿತ್ತು. ನಾನು 2010ರ ಐಪಿಎಲ್​ನಲ್ಲಿ ಗರಿಷ್ಠ ಸಿಕ್ಸರ್​ ಸಿಡಿಸಿದ ಪ್ರಶಸ್ತಿಗೆ ಭಾಜನವಾಗಿದ್ದೆ ಮತ್ತು ಕೆಲ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದೆ. ಹೀಗಾಗಿ ತಂಡ ನನ್ನನ್ನು ರಿಟೇನ್​ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದೆ. ಆದರೆ ಪುಣೆಗೆ ಬಿಟ್ಟುಕೊಟ್ಟಾಗ ಅಚ್ಚರಿಯಾಗಿತ್ತು' ಎಂದು ಉತ್ತಪ್ಪ ಹೇಳಿದ್ದಾರೆ.

2009-2010ರ ಐಪಿಎಲ್​ನಲ್ಲಿ ಉತ್ತಪ್ಪ ಆರ್​ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದರು. 2008ರ ಮೊದಲ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಿದ ಬಳಿಕ ನನ್ನ ನಿಷ್ಠೆಯನ್ನು ಬದಲಾಯಿಸಿಕೊಳ್ಳುವುದು ಕೂಡ ಕಷ್ಟವಾಗಿತ್ತು ಎಂದು ಉತ್ತಪ್ಪ ತಿಳಿಸಿದ್ದಾರೆ. ನಂತರದ ದಿನಗಳಲ್ಲಿ ಉತ್ತಪ್ಪ ಕೆಕೆಆರ್​, ರಾಜಸ್ಥಾನ ಮತ್ತು ಸಿಎಸ್​ಕೆ ತಂಡಗಳ ಪರವಾಗಿಯೂ ಆಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net