ಕ್ರಿಕೆಟ್​ನಲ್ಲಿ ವಿದಾಯದ ವರ್ಷ 2024! ಸಾಲು ಸಾಲು ಕ್ರಿಕೆಟ್​ ತಾರೆಯರ ನಿವೃತ್ತಿ...

web retire
Published on

ಬೆಂಗಳೂರು: ಕ್ರಿಕೆಟ್​ನಲ್ಲಿ ಸಾಲು ಸಾಲು ಆಟಗಾರರು 2024ರ ಕ್ಯಾಲೆಂಡರ್​ ವರ್ಷದಲ್ಲಿ ವಿದಾಯ ಘೋಷಿಸಿದ್ದು, ಆರ್​. ಅಶ್ವಿನ್​ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಈ ಮುನ್ನ ಟಿ20 ವಿಶ್ವಕಪ್​ ಗೆಲುವಿನ ಬಳಿಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ರವಿಂದ್ರ ಜಡೇಜಾ ಚುಟುಕು ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಶಿಖರ್​ ಧವನ್​, ದಿನೇಶ್​ ಕಾರ್ತಿಕ್​, ಕೇದಾರ್​ ಜಾಧವ್​, ಸೌರಭ್​ ತಿವಾರಿ, ವೃದ್ಧಿಮಾನ್​ ಸಾಹ, ಸಿದ್ಧಾರ್ಥ್​ ಕೌಲ್​, ವರುಣ್​ ಆರನ್​, ಬರಿಂದರ್​ ಸ್ರಾನ್​ ಎಲ್ಲ ಮಾದರಿಗೆ ವಿದಾಯ ಹೇಳಿದ್ದರು.

ಆಸ್ಟ್ರೆಲಿಯಾದ ಡೇವಿಡ್​ ವಾರ್ನರ್​, ಮ್ಯಾಥ್ಯೂ ವೇಡ್​, ದ. ಆಫ್ರಿಕಾದ ಡೀನ್​ ಎಲ್ಗರ್​, ನ್ಯೂಜಿಲೆಂಡ್​ನ ಕಾಲಿನ್​ ಮುನ್ರೋ, ನೀಲ್​ ವ್ಯಾಗ್ನರ್​, ಟಿಮ್​ ಸೌಥಿ, ಇಂಗ್ಲೆಂಡ್​ನ ಜೇಮ್ಸ್​ ಆಂಡರ್​ಸನ್​, ಮೊಯಿನ್​ ಅಲಿ, ಡೇವಿಡ್​ ಮಲಾನ್​, ಪಾಕಿಸ್ತಾನದ ಮೊಹಮದ್​ ಆಮಿರ್​, ಇಮಾದ್​ ವಾಸಿಂ ಎಲ್ಲ ಮಾದರಿಗೆ ವಿದಾಯ ಹೇಳಿದ್ದರು.

ಬಾಂಗ್ಲಾದೇಶದ ಶಕೀಬ್​ ಅಲ್​ ಹಸನ್​ ಟೆಸ್ಟ್​, ಟಿ20ಗೆ ವಿದಾಯ ಹೇಳಿದ್ದರೆ, ಮಹಮದುಲ್ಲಾ ಟಿ20ಗೆ ವಿದಾಯ ಹೇಳಿದ್ದರು. ದ. ಆಫ್ರಿಕಾದ ಹೆನ್ರಿಕ್​ ಕ್ಲಾಸೆನ್​ ಟೆಸ್ಟ್​ಗೆ, ನ್ಯೂಜಿಲೆಂಡ್​ನ ಟ್ರೆಂಟ್​ ಬೌಲ್ಟ್​ ಟಿ20ಗೆ ವಿದಾಯ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net