

ನವದೆಹಲಿ: ಟೀಮ್ ಇಂಡಿಯಾ ಮಾಜಿ ವೇಗಿ ಸಿದ್ಧಾರ್ಥ್ ಕೌಲ್ ಗುರುವಾರ ಭಾರತೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಅವರು 2018-19ರಲ್ಲಿ ಭಾರತ ಪರ ತಲಾ 3 ಏಕದಿನ ಮತ್ತು ಟಿ20 ಪಂದ್ಯ ಆಡಿದ್ದರು. ಈ ಪೈಕಿ ಟಿ20ಯಲ್ಲಿ 4 ವಿಕೆಟ್ ಕಬಳಿಸಿದ್ದರು.
ಪಂಜಾಬ್ನ 34 ವರ್ಷದ ಸಿದ್ಧಾರ್ಥ್ ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ (ಈಗ ಕ್ಯಾಪಿಟಲ್ಸ್), ಕೆಕೆಆರ್, ಸನ್ರೈಸರ್ಸ್ ಮತ್ತು ಆರ್ಸಿಬಿ ಪರ ಆಡಿದ್ದಾರೆ. 2008ರಲ್ಲಿ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ವೇಗಿಯಾಗಿದ್ದ ಸಿದ್ಧಾರ್ಥ್ ಕೌಲ್, ಇನ್ನು ವಿದೇಶಿ ಟಿ20 ಲೀಗ್ಗಳಲ್ಲಿ ಆಡುವ ನಿರೀಕ್ಷೆ ಇದೆ.
ದೇಶೀಯ ಕ್ರಿಕೆಟ್ನಲ್ಲಿ ಒಟ್ಟಾರೆ 88 ಪ್ರಥಮ ದರ್ಜೆ ಪಂದ್ಯ ಆಡಿರುವ ಅವರು, 297 ವಿಕೆಟ್ ಕಬಳಿಸಿದ್ದಾರೆ. 111 ಲಿಸ್ಟ್ ಎ ಏಕದಿನ ಪಂದ್ಯಗಳಲ್ಲಿ 199 ವಿಕೆಟ್ ಮತ್ತು 145 ಟಿ20 ಪಂದ್ಯಗಳಲ್ಲಿ 182 ವಿಕೆಟ್ ಗಳಿಸಿದ್ದಾರೆ..