ಐಪಿಎಲ್ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದು ಟ್ರೋಲ್ ಆದ ಚೆನ್ನೈ ಸೂಪರ್‌ಕಿಂಗ್ಸ್!

csk web
Published on

ಬೆಂಗಳೂರು: ಐಪಿಎಲ್ 13ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಇದೀಗ ಲೀಗ್ ಹಂತದ 11 ಪಂದ್ಯಗಳ ಅಂತ್ಯಕ್ಕೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿತ ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ಟೂರ್ನಿಯಲ್ಲಿ ಕೊನೇ ತಂಡವಾಗಿ ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್‌ ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿಕೆ ಕಾಣುವುದರೊಂದಿಗೆ ಸಿಎಸ್‌ಕೆ ತಂಡ 7ರಿಂದ 8ನೇ ಹಾಗೂ ಕೊನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇದರ ಬೆನ್ನಲ್ಲೇ ಸಿಎಸ್‌ಕೆ ತಂಡದ ಟೀಕಾಕಾರರು ಸಾಮಾಜಿಕ ಜಾಲತಾಣಗಳಲ್ಲಿ ತಂಡವನ್ನು ಭಾರಿ ಟ್ರೋಲ್ ಮಾಡಿದ್ದಾರೆ.

ಸಿಎಸ್‌ಕೆ ತಂಡ ಟೂರ್ನಿಯ ಇತಿಹಾಸದಲ್ಲಿ ಆಡಿದ 10 ಬಾರಿಯೂ ಕನಿಷ್ಠ ಸೆಮಿೈನಲ್ ಅಥವಾ ಪ್ಲೇಆ್ ಹಂತಕ್ಕೇರಿದ ದಾಖಲೆ ಹೊಂದಿದೆ. ಆದರೆ ಇದೀಗ ಸತತ 2 ಸೋಲಿನಿಂದ ಕಂಗೆಟ್ಟಿದೆ. ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಟೂರ್ನಿಯಲ್ಲಿ ಆಡದೆ ತಂಡಕ್ಕೆ ಹಿನ್ನಡೆ ಉಂಟು ಮಾಡಿದ್ದರೆ, ಅಂಬಟಿ ರಾಯುಡು ಮತ್ತು ಡ್ವೇನ್ ಬ್ರಾವೊ ಗಾಯದ ಸಮಸ್ಯೆಯೂ ತಂಡವನ್ನು ಕಾಡಿದೆ.

ಐಪಿಎಲ್ ಟೂರ್ನಿಯ ಇತಿಹಾಸವನ್ನು ಅವಲೋಕಿಸಿದಾಗ ಚೆನ್ನೈ ತಂಡ ಲೀಗ್ ಹಂತದ ಯಾವುದೇ ಸಮಯದಲ್ಲಿ ಕೊನೇ ಸ್ಥಾನ ಅಲಂಕರಿಸಿದ್ದು ಅಪರೂಪವೆನ್ನಬಹುದು. ಹೀಗಾಗಿ ಈ ಹಿಂದೆ ಬೇರೆ ತಂಡಗಳ ಕಾಲೆಳೆಯುತ್ತಿದ್ದ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಇತರ ತಂಡಗಳ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ವಿವಿಧ ಮೀಮ್ಸ್‌ಗಳ ಮೂಲಕ ಚೆನ್ನೈ ತಂಡವನ್ನು ಛೇಡಿಸಿ ಖುಷಿಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net