ಎಂಎಸ್ ಧೋನಿ ದಂಪತಿ ಈಗ ವೆಬ್ ಸಿರೀಸ್ ನಿರ್ಮಾಪಕರು!

dhoni-sakshi-web
Published on

ನವದೆಹಲಿ: ಕಳೆದ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಈಗ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಇದಕ್ಕೆ ಅವರ ಪತ್ನಿ ಸಾಕ್ಷಿ ಸಿಂಗ್ ಕೂಡ ಸಾಥ್ ನೀಡುತ್ತಿದ್ದಾರೆ. ವೆಬ್ ಸಿರೀಸ್ ನಿರ್ಮಾಣದ ಮೂಲಕ ಧೋನಿ ದಂಪತಿ ಮನರಂಜನ ಕ್ಷೇತ್ರವನ್ನು ಪ್ರವೇಶಿಸುತ್ತಿದೆ.

‘ಧೋನಿ ಎಂಟರ್‌ಟೈನ್‌ಮೆಂಟ್’ ಎಂಬ ಹೊಸ ಬ್ಯಾನರ್ ಅನ್ನು ಧೋನಿ ದಂಪತಿ ಈಗಾಗಲೆ ಸ್ಥಾಪಿಸಿದ್ದು, ‘ರೋರ್ ಆ್ ದಿ ಲಯನ್’ ಹೆಸರಿನಲ್ಲಿ ಸಾಕ್ಷ್ಯಚಿತ್ರವನ್ನೂ ಕಳೆದ ವರ್ಷ ನಿರ್ಮಾಣ ಮಾಡಿದೆ. ಇದು 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್‌ಗೆ ಮರಳಿದ ವಿಷಯವನ್ನು ಒಳಗೊಂಡಿತ್ತು.

‘ಹೊಸ ಲೇಖಕರೊಬ್ಬರ ಇನ್ನೂ ಪ್ರಕಟಣೆಯಾಗದ ಪುಸ್ತಕದ ಹಕ್ಕನ್ನು ನಾವು ಪಡೆದುಕೊಂಡಿದ್ದೇವೆ. ಅದನ್ನು ನಾವು ವೆಬ್ ಸಿರೀಸ್ ಮಾಡಲಿದ್ದೇವೆ. ಅದು ಪೌರಾಣಿಕ ವೈಜ್ಞಾನಿಕ ಕಾದಂಬರಿ ಆಗಿದ್ದು, ನಿಗೂಢ ಅೋರಿಯ ಜೀವನಗಾಥೆಯನ್ನು ಹೊಂದಿದೆ’ ಎಂದು ಪ್ರೊಡಕ್ಷನ್ ಹೌಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಸಾಕ್ಷಿ ಸಿಂಗ್ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಕ್ರಿಯೇಟಿವ್ ಟೀಮ್ ಇನ್ನೂ ವೆಬ್ ಸಿರೀಸ್‌ನ ತಾರಾಗಣ ಮತ್ತು ನಿರ್ದೇಶಕರನ್ನು ಅಂತಿಮಗೊಳಿಸಿಲ್ಲ. ‘ರೋರ್ ಆ್ ಲಯನ್ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದಾಗಲೇ ನಾವು, ಮನರಂಜನ ಉದ್ಯಮವನ್ನು ಪ್ರವೇಶಿಸಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೆವು. ಪ್ರತಿಭಾನ್ವಿತರಿಗೆ ಉತ್ತಮವಾದ ಅವಕಾಶವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಸಾಧ್ಯವಾದಷ್ಟು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಿದ್ದೇವೆ. ಮಹಿ (ಧೋನಿ) ಭಾಗಶಃ ಪ್ರೊಡಕ್ಷನ್ ಹೌಸ್‌ನಲ್ಲಿ ತೊಡಗಿಕೊಂಡಿದ್ದಾರೆ. ಇದರ ದೈನಂದಿನ ಚಟುವಟಿಕೆಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ’ ಎಂದು ಸಾಕ್ಷಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net