

ಕೋಲ್ಕತ: ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ಅಚ್ಚರಿಯ 23.75 ಕೋಟಿ ರೂ.ಗಳಿಗೆ ಕೋಲ್ಕತ ನೈಟ್ರೈಡರ್ಸ್ ತಂಡಕ್ಕೆ ಮರಳಿದ್ದರು. ಇದರ ಬೆನ್ನಲ್ಲೇ ಕೆಕೆಆರ್, ತಂಡದ ದುಬಾರಿ ಆಟಗಾರನಿಗೇ ನಾಯಕತ್ವವನ್ನೂ ನೀಡುವ ನಿರೀೆ ಮೂಡಿತ್ತು. ಆದರೆ ಇದೀಗ ಈ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಕಾಣಿಸಿದೆ. ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಮುಂದಿನ ಐಪಿಎಲ್ ಆವೃತ್ತಿಗೆ ಕೆಕೆಆರ್ ತಂಡದ ನಾಯಕರಾಗಿ ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಮೆಗಾ ಹರಾಜಿನಲ್ಲಿ ಮೂಲಬೆಲೆ 1.5 ಕೋಟಿ ರೂ.ಗೆ ಕೆಕೆಆರ್ ತಂಡ ಸೇರಿಕೊಂಡಿರುವ ರಹಾನೆ, ಭಾರತ ಟೆಸ್ಟ್ ತಂಡ ಮತ್ತು ಮುಂಬೈ ರಣಜಿ ತಂಡಗಳ ನಾಯಕತ್ವ ವಹಿಸಿದ ಅನುಭವ ಹೊಂದಿದ್ದಾರೆ. 36 ವರ್ಷದ ರಹಾನೆ ಈ ಹಿಂದೆ 2018 ಮತ್ತು 2019ರ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದರು.
"ರಹಾನೆ ಕೆಕೆಆರ್ ತಂಡದ ಹೊಸ ನಾಯಕರಾಗುವುದು ಶೇ. 90 ಖಚಿತಗೊಂಡಿದೆ. ನಾಯಕತ್ವ ನೀಡುವ ಉದ್ದೇಶದಿಂದಲೇ ಕೆಕೆಆರ್ ತಂಡ ಹರಾಜಿನಲ್ಲಿ ಅವರನ್ನು ಖರೀದಿಸಿತ್ತು' ಎಂದು ಕೆಕೆಆರ್ ಫ್ರಾಂಚೈಸಿ ಮೂಲಗಳು ತಿಳಿಸಿವೆ.
ಕೆಕೆಆರ್ ತಂಡದ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಈ ಹಿಂದೆ ಮಧ್ಯಪ್ರದೇಶ ರಣಜಿ ತಂಡದ ತರಬೇತುದಾರರಾಗಿದ್ದಾಗಲೂ ವೆಂಕಟೇಶ್ ಅಯ್ಯರ್ ಜತೆಗೆ ಕಾರ್ಯನಿರ್ವಹಿಸಿದ್ದರು. ಹೀಗಾಗಿ ವೆಂಕಟೇಶ್ಗೆ ನಾಯಕತ್ವ ನೀಡುವ ನಿರೀೆ ಹೆಚ್ಚಿತ್ತು. ಹರಾಜಿನಲ್ಲಿ ಕೆಕೆಆರ್ ತಂಡಕ್ಕೆ ಮರಳಿದ ಬೆನ್ನಲ್ಲೇ ವೆಂಕಟೇಶ್ ಅಯ್ಯರ್ ಕೂಡ ತಂಡದ ನಾಯಕತ್ವ ಜವಾಬ್ದಾರಿಯನ್ನೂ ವಹಿಸಿಕೊಳ್ಳಲು ಸಿದ್ಧ ಎಂದಿದ್ದರು.