ನ್ಯೂಜಿಲೆಂಡ್​ಗೆ ಸೋಲುಣಿಸಿದ ಇಂಗ್ಲೆಂಡ್​; ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ರೇಸ್​ನಲ್ಲಿ ಭಾರತಕ್ಕೆ ಲಾಭ!

blank

ಕ್ರೈಸ್ಟ್​ಚರ್ಚ್​: ಭಾರತಕ್ಕೆ ವೈಟ್​ವಾಷ್​ ಸೋಲುಣಿಸಿ ವಿಶ್ವಾಸದೊಂದಿಗೆ ತವರಿಗೆ ಮರಳಿದ್ದ ನ್ಯೂಜಿಲೆಂಡ್​ ತಂಡ ಕ್ರೋವ್​-ಥೋರ್ಪೆ ಟ್ರೋಫಿ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್​ ಎದುರು 8 ವಿಕೆಟ್​ಗಳಿಂದ ಸೋಲಿನ ಆಘಾತ ಎದುರಿಸಿದೆ. ಇದರಿಂದ ಬೆನ್​ ಸ್ಟೋಕ್ಸ್​ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಹ್ಯಾಗ್ಲೆ ಓವಲ್​ನಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 6 ವಿಕೆಟ್​ಗೆ 155 ರನ್​ಗಳಿಂದ 4ನೇ ದಿನದಾಟ ಆರಂಭಿಸಿದ ಕಿವೀಸ್​, ಭೋಜನ ವಿರಾಮದ ವೇಳೆಗೆ 254 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ ಗೆಲುವಿಗೆ 104 ರನ್​ ಗುರಿ ಪಡೆದ ಇಂಗ್ಲೆಂಡ್​ 12.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟದಲ್ಲಿ ಗುರಿ ತಲುಪಿತು. ಪದಾರ್ಪಣೆ ಪಂದ್ಯವಾಡಿದ ಜೇಕಬ್​ ಬೆಥೆಲ್​ (50*ರನ್​, 37 ಎಸೆತ, 8 ಬೌಂಡರಿ, 1 ಸಿಕ್ಸರ್​) ಬಿರುಸಿನಾಟದಿಂದ ಇಂಗ್ಲೆಂಡ್​, ಪ್ರತಿ ಓವರ್​ಗೆ 8.21 ರನ್​ ಸರಾಸರಿಯಲ್ಲಿ ಚೇಸಿಂಗ್​ ಮಾಡಿತು. ಸರಣಿಯ 2ನೇ ಟೆಸ್ಟ್​ ಡಿಸೆಂಬರ್​ 6ರಿಂದ ವೆಲ್ಲಿಂಗ್ಟನ್​ನಲ್ಲಿ ನಡೆಯಲಿದೆ.

2ನೇ ಇನಿಂಗ್ಸ್​ನಲ್ಲಿ 42 ರನ್​ಗಳಿಗೆ 6 ವಿಕೆಟ್​ ಸಹಿತ ಪಂದ್ಯದಲ್ಲಿ ಒಟ್ಟು 10 ವಿಕೆಟ್​ ಕಬಳಿಸಿದ ವೇಗಿ ಬೆಡನ್​ ಕರ್ಸ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ನ್ಯೂಜಿಲೆಂಡ್​: 348 ಮತ್ತು 254 (ಮಿಚೆಲ್​ 84, ಸ್ಮಿತ್​ 21, ಸೌಥಿ 12, ಕರ್ಸ್​ 42ಕ್ಕೆ 6, ವೋಕ್ಸ್​ 59ಕ್ಕೆ 3), ಇಂಗ್ಲೆಂಡ್​: 499 ಮತ್ತು 2 ವಿಕೆಟ್​ಗೆ 104 (ಕ್ರೌಲಿ 1, ಡಕೆಟ್​ 27, ಬೆಥೆಲ್​ 50*, ರೂಟ್​ 23*, ಹೆನ್ರಿ 12ಕ್ಕೆ 1, ಓರೌರ್ಕಿ 27ಕ್ಕೆ 1). ಪಂದ್ಯಶ್ರೇಷ್ಠ: ಬೆಡನ್​ ಕರ್ಸ್​.

ಭಾರತಕ್ಕೆ ಅನುಕೂಲ
ಕಿವೀಸ್​ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್​ ಗೆದ್ದಿರುವುದು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​ ರೇಸ್​ನಲ್ಲಿ ಭಾರತಕ್ಕೆ ತುಸು ಅನುಕೂಲ ಮಾಡಿಕೊಟ್ಟಿದೆ. ಇನ್ನು ಭಾರತ ನೇರವಾಗಿ ಡಬ್ಲ್ಯುಟಿಸಿ ಫೈನಲ್​ಗೇರಲು ಬಾರ್ಡರ್​-ಗಾವಸ್ಕರ್​ ಟ್ರೋಫಿಯಲ್ಲಿ 5-0 ಅಥವಾ 4-0 ಅಂತರದಿಂದಲೇ ಗೆಲ್ಲಬೇಕೆಂದಿಲ್ಲ. 4-1 ಅಥವಾ 3-0 ಅಂತರದಿಂದ ಗೆದ್ದರೂ ಸಾಕಾಗುತ್ತದೆ. ಆಗ ಅಂಕಗಳಿಕೆಯಲ್ಲಿ ಭಾರತವನ್ನು ದಣ ಆಫ್ರಿಕಾಕ್ಕೆ ಮಾತ್ರ ಹಿಂದಿಕ್ಕಲು ಸಾಧ್ಯವಿದೆ. ಇದಲ್ಲದೆ ಭಾರತ 3-2ರಿಂದ ಸರಣಿ ಗೆದ್ದರೂ ಸತತ 3ನೇ ಬಾರಿ ಡಬ್ಲ್ಯುಟಿಸಿ ಫೈನಲ್​ಗೇರುವ ಅವಕಾಶ ಹೆಚ್ಚಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಸ್ಟ್ಯಾಂಡ್​ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಒತ್ತಾಯ

TAGGED:
Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…