

ಕೊಲ್ಕತ: ಭಾನುವಾರ ಗುಜರಾತ್ ಟೈಟಾನ್ಸ್ ಹಾಗೂ ಕೊಲ್ಕತ ನೈಟ್ ರೈಡರ್ಸ್ ನಡುವೆ ನಡೆದ ಪಂದ್ಯದಲ್ಲಿ KKR ತಂಡವನ್ನು ಗೆಲುವಿನ ದಡ ಸೇರಿಸಿದ್ದ ರಿಂಕು ಸಿಂಗ್ ಇದೀಗ ಇಂಟರ್ನೆಟ್ ಸೆನಸೇಷನ್ ಆಗಿ ಹೊರಹೊಮ್ಮಿದ್ದಾರೆ.
ಇನ್ನು ಕೆಕೆಆರ್ಗೆ ಅಂತಿಮ ಓವರ್ನಲ್ಕಲಿ ಗೆಲ್ಲಲು 32 ರನ್ ಬೇಕಾಗಿದ್ಧಾಗ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ್ದ ರಿಂಕು ನಂತರ ಎದುರಿಸಿದ 5 ಎಸೆತಗಳಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಸೋಲಿನತ್ತ ಮುಖ ಮಾಡಿದ ತಂಡವನ್ನು ಗೆಲುವಿನ ದಡ ಸೇರಿದ್ದಾರೆ.
ಇನ್ನು ಈ ಆಟಗಾರನ ಆಟ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಹಾಲಿ-ಮಾಜಿ ಕ್ರಿಕೆಟಿಗರು ಮೆಚ್ಚುಗೆಯ ಮಹಾಪೂರ್ವನ್ನೆ ಹರಿಸಿದ್ದಾರೆ.
ಮೂಲತಃ ಉತ್ತರ ಪ್ರದೇಶದ ಆಲಿಘರ್ನವರಾದ ರಿಂಕು ಸಿಂಗ್ ಬಡ ಮಧ್ಯಮ ಕುಟುಂಬದ ಹಿನ್ನಲೆಯಿಂದ ಬಂದವರು. ತಂದೆ ಗ್ಯಾಸ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು ಮನೆಯಲ್ಲಿ ಸಾಲ ತೀರಿಸುವುದಕ್ಕಾಗಿ ರಿಂಕು ಕ್ರಿಕೆಟ್ ಜೊತೆ ಜೊತೆಗೆ ಕೆಲಸ ಮಾಡುತ್ತಿದ್ದರು.
ನಾನು ರೈತ ಕುಟುಂಬದ ಹಿನ್ನಲೆಯಿಂದ ಬಂದವನು ನಮ್ಮನ್ನು ಸಾಕಲು ನಮ್ಮ ಮನೆಯಲ್ಲಿ ತುಂಬಾ ಕಷ್ಟಪಟ್ಟಿದ್ದಾರೆ. ನಾನು ಹೊಡೆದ ಪ್ರತಿಯೊಂದು ಸಿಕ್ಸರ್ ನನಗಾಗಿ ತ್ಯಾಗ ಮಾಡಿದವರಿಗೆ ಸರ್ಮಪಿಸುತ್ತೇನೆ ಎಂದು ಹೇಳಿದ್ದಾರೆ.
ಮೊದಲಿಗೆ ನನ್ನ ಕೈಯಿಂದ ಇದು ಸಾದ್ಯನಾ ಎಂದು ಅಂದುಕೊಂಡಿದ್ದೆ ನಂತರ ನಾನು ಎದುರಿಸಿದ ಅಷ್ಟು ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸುತ್ತೇನೆ ಎಂದು ಊಹಿಸಿರಲಿಲ್ಲವೆಂದು ರಿಂಕು ಸಿಂಗ್ ಹೇಳಿದ್ದಾರೆ.