

ಇಳಕಲ್: ಇಂಡಿಯನ್ ಪ್ರೀಮಿಯರ್ ಲೀಗ್(IPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಕಳೆದ 15 ಆವೃತ್ತಿಗಳಿಂದ ಕಪ್ ಒಲಿದಿಲ್ಲ. ಆದರೆ, ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಮೇಲಿನ ಅಭಿಮಾನವನ್ನು ಕಡಿಮೆ ಮಾಡಿಲ್ಲ.
ಪ್ರತಿ ಬಾರಿಯೂ ಈ ಸಲ ಕಪ್ ನಮ್ದೇ ಎಂಬ ಗೊಷೌಆಕ್ಯದೊಂದಿಗೆ ತಂಡದ ಮೇಲಿನ ತಮ್ಮ ಪ್ರೀತಿಯನ್ನು ತೋಪರ್ಡಿಸುತ್ತಿರುತ್ತಾರೆ.
ಕೆಲವೆಡೆ ತಮ್ಮ ಅಭಿಮಾನವನ್ನು ತೋರ್ಪಡಿಸಲು ಟ್ಯಾಟೂ, ವಿಭಿನ್ನ ಹೇರ್ಸ್ಟೈಲ್ ಮಾಡಿಸಿಕೊಳ್ಳುವ ಮೂಲಕ ಅಭಿಮಾನ ವ್ಯಕ್ತಪಡಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಅಭಿಮಾನಿ ಇಳಕಲ್ ಸೀರೆ ಮೇಲೆ ಈ ಸಲ ಕಪ್ ನಮ್ದೇ ಎಂಬ ಘೋಷವಾಕ್ಯವನ್ನು ನೇಯ್ಗೆ ಮಾಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಮೇಘರಾಜ್ ಎಂಬ ಯುವಕನ್ನು ಇಳಕಲ್ ಸೀರೆ ಮೇಲೆ ಈ ಸಲ ಕಪ್ ನಮ್ದೇ ಎಂಬ ಘೋಷವಾಕ್ಯವನ್ನು ನೇಯ್ಗೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಸೀರೆಯನ್ನು ಮಾರಾಟ ಮಾಡುವುದಿಲ್ಲ ಬದಲಿಗೆ ತಂಡಕ್ಕೆ ಉಡುಗೊರೆಯಾಗಿ ಕೊಡುತ್ತೇನೆ ದಂಉ ಮೇಘರಾಜ್ ತಿಳಿಸಿದ್ದಾರೆ.
ಇನ್ನು ಈ ಸೀರೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸೀರೆಗೆ ಡಿಮ್ಯಾಂಡ್ ಹೆಚ್ಚಿದ್ದು ಬಾರಿ ಮೊತ್ತಕ್ಕೆ ಮಾರಾಟವಾಗುತ್ತದೆ ಎಂದು ಜನರು ಅಂದಾಜಿಸಿದ್ಧಾರೆ.
ಇನ್ನು ಕೆಲವರು ನೆಟ್ಟಿಗರು ನಿಮ್ಮ ಅಭಿಮಾನದ ಈ ಕಾರ್ಯ ಉತ್ತಮ ಆದಾಯ ತಂದುಕೊಡುತ್ತದೆ. ಇನ್ನು ಕೆಲವರು ಈ ಸೀರೆಯನ್ನು ತಮಗೆ ಮಾರಾಟ ಮಾಡುವಂತೆ ಮೇಘರಾಜ್ಗೆ ಕಮೆಂಟ್ ಮಾಡುವ ಮೂಲಕ ಕೋರಿದ್ಧಾರೆ.