ಒಲಿಂಪಿಕ್ಸ್ ಈಕ್ವೇಸ್ಟ್ರಿಯನ್‌ನಲ್ಲಿ ಬೆಂಗಳೂರಿನ ಫವಾದ್ ಮಿರ್ಜಾಗೆ 23ನೇ ಸ್ಥಾನ..

fawad for web
Published on

ಟೋಕಿಯೊ: ಭಾರತದ ಈಕ್ವೆಸ್ಟ್ರಿಯನ್ ಪಟು ಫವಾದ್ ಮಿರ್ಜಾ ವೈಯಕ್ತಿಕ ವಿಭಾಗದಲ್ಲಿ 25 ಮಂದಿ ಪೈಕಿ 23ನೇ ಸ್ಥಾನ ಪಡೆದರು. ಒಟ್ಟಾರೆ 59.60 ಪೆನಾಲ್ಟಿ ಪಡೆದ ಫವಾದ್ ಮಿರ್ಜಾ, ನೀರಸ ನಿರ್ವಹಣೆಯಿಂದ ನಿರಾಸೆ ಅನುಭವಿಸಿದರು. ಇದೇ ವಿಭಾಗದಲ್ಲಿ ಜರ್ಮನಿಯ ಕ್ರೇಜೆವ್‌ಸ್ಕಿ ಜೂಲಿಯಾ (26ಪೆನಾಲ್ಟಿ) ಹಾಗೂ ಬ್ರಿಟನ್‌ನ ಮೆಕ್‌ಇವೆನ್ ಟಾಮ್ (29.40ಪೆನಾಲ್ಟಿ) ಹಾಗೂ ಆಸ್ಟ್ರೇಲಿಯಾದ ಹೊಯೆ ಆಂಡ್ರ್ಯು (29.60ಪೆನಾಲ್ಟಿ) ಕ್ರಮವಾಗಿ ಸ್ವರ್ಣ, ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಿನ 29 ವರ್ಷದ ವಾದ್ ಮಿರ್ಜಾ ಕ್ರಾಸ್ ಕಂಟ್ರಿ ವಿಭಾಗದಲ್ಲಿ 22ನೇ ಸ್ಥಾನ ಅಲಂಕರಿಸಿದ್ದರೆ, ಡ್ರೆಸೆಜ್‌ನಲ್ಲಿ ಅಗ್ರ 10 ಸ್ಥಾನ ಪಡೆದಿದ್ದರು.

2 ದಶಕಗಳ ಬಳಿಕ ಈಕ್ವೇಸ್ಟ್ರಿಯನ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದ ಫವಾದ್ ಮಿರ್ಜಾ, ವೈಯಕ್ತಿಕ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಈಕ್ವೇಸ್ಟ್ರಿಯನ್ ಪಟು ಎನಿಸಿದ್ದಾರೆ. ಅಂತಿಮ ಸುತ್ತಿನಲ್ಲಿ 12.40 ಪೆನಾಲ್ಟಿ ಪಾಯಿಂಟ್ಸ್ ಪಡೆದ ವಾದ್ ಒಟ್ಟಾರೆ 59.60 ಪೆನಾಲ್ಟಿ ಪಾಯಿಂಟ್ಸ್ ಪಡೆದರು. 2000ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಇಮ್ತಿಯಾಜ್ ಅನೀಶ್ ಈ ಸಾಧನೆ ಮಾಡಿದ್ದರು. 1996ರ ಅಟ್ಲಾಂಟದಲ್ಲಿ ದಿವಂಗತ ವಿಂಗ್ ಕಮಾಂಡರ್ ಐಜೆ ಲಾಂಬ ಈ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಮೂರು ಅರ್ಹತಾ ವಿಭಾಗದಲ್ಲಿ ಮಿರ್ಜಾ ಸ್ಪರ್ಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net