IPL 2024: ಸಿಎಸ್​ಕೆ ವಿರುದ್ಧ ಗೆದ್ದರೂ ಶುಭಮನ್​ ಗಿಲ್​ಗೆ 24 ಲಕ್ಷ ರೂ. ದಂಡ, ಕಾರಣ ಹೀಗಿದೆ..!

gill
Published on

ನವದೆಹಲಿ: ಐಪಿಎಲ್​ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್​ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ನಿಧಾನಗತಿಯ ಬೌಲಿಂಗ್​ ಕಾರಣಕ್ಕೆ ಶುಭಮನ್​ಗಿಲ್​ಗೆ ಇದ ಎರಡನೇ ಬಾರಿ ದಂಡ ವಿಧಿಸುತ್ತಿರುವುದಾಗಿದೆ.

ನಿನ್ನೆ ( ಶುಕ್ರವಾರ) ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಾರೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರೊಂದಿಗೆ ಇಂಪ್ಯಾಕ್ಟ್‌ ಪ್ಲೇಯರ್‌ ಸೇರಿದಂತೆ ತಂಡದ ಉಳಿದ 11 ಆಟಗಾರರಿಗೆ ವೈಯುಕ್ತಿಕವಾಗಿ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ 25 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ. ಮೊದಲ ಬಾರಿಗೆ ನಿಧಾನಗತಿಯ ಓವರ್‌ರೇಟ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.

ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಭರ್ಜರಿ ಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 35 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಕಳೆದ 3 ಪಂದ್ಯಗಳಿಂದ ಸೋತಿದ್ದ ಜಿಟಿ, ಕೊನೆಗೂ ಲಯಕ್ಕೆ ಮರಳಿತು.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಶುಭಮನ್ ಗಿಲ್​ ತಂಡವು 35 ರನ್​ಗಳಿಂದ ಜಯಗಳಿಸಿತು. ಈ ಮೂಲಕ ಟೈಟನ್ಸ್​ ತಂಡವು ಪ್ಲೇ ಆಪ್​ ಕನಸು ಜೀವಂತವಾಗಿಸಿಕೊಂಡಿತು.

ಟೈಟಾನ್ಸ್ ಈಗ 12 ಪಂದ್ಯಗಳಿಂದ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಸಿಎಸ್​ಕೆ ಹಲವು ಪಂದ್ಯಗಳಿಂದ 12 ಅಂಕಗಳೊಂದಿಗೆ ಸೋಲಿನ ಹೊರತಾಗಿಯೂ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net