ಇಂಗ್ಲೆಂಡ್​ ಯುವ ಆಟಗಾರ ಈಗ ವಿಶ್ವ ನಂ. 1 ಟೆಸ್ಟ್​ ಬ್ಯಾಟರ್​!

web brook
Published on

ದುಬೈ: ಇಂಗ್ಲೆಂಡ್​ ಯುವ ಬ್ಯಾಟರ್​ ಹ್ಯಾರಿ ಬ್ರೂಕ್​ ದೇಶಬಾಂಧವ ಅನುಭವಿ ಬ್ಯಾಟರ್​ ಜೋ ರೂಟ್​ ಅವರನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್​ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಬೌಲರ್​ ಮತ್ತು ಆಲ್ರೌಂಡರ್ಸ್​ ರ‍್ಯಾಂಕಿಂಗ್​ನಲ್ಲಿ ಭಾರತದ ಜಸ್​ಪ್ರೀತ್​ ಬುಮ್ರಾ ಮತ್ತು ರವೀಂದ್ರ ಜಡೇಜಾ ನಂ. 1 ಪಟ್ಟ ಕಾಯ್ದುಕೊಂಡಿದ್ದಾರೆ.

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸತತ 2 ಶತಕ ಸಿಡಿಸಿದ ಹಿನ್ನೆಲೆಯಲ್ಲಿ 25 ವರ್ಷದ ಹ್ಯಾರಿ ಬ್ರೂಕ್​ 2ನೇ ಸ್ಥಾನದಿಂದ ನಂ. 1 ಪಟ್ಟಕ್ಕೆ ಜಿಗಿದಿದ್ದಾರೆ. ರೂಟ್​ಗಿಂತ (897) ಬ್ರೂಕ್​ (898) ಕೇವಲ ಒಂದು ಅಂಕದ ಮುನ್ನಡೆ ಸಾಧಿಸಿದ್ದಾರೆ. ರೂಟ್​ ಕಳೆದ ಜುಲೈನಿಂದಲೂ ಅಗ್ರಸ್ಥಾನದಲ್ಲಿದ್ದರು. ನ್ಯೂಜಿಲೆಂಡ್​ನ ಕೇನ್​ ವಿಲಿಯಮ್ಸನ್​ ಮತ್ತು ಭಾರತದ ಯಶಸ್ವಿ ಜೈಸ್ವಾಲ್​ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪಂತ್​, ಕೊಹ್ಲಿ ಕುಸಿತ: ಭಾರತದ ವಿಕೆಟ್​ ಕೀಪರ್-ಬ್ಯಾಟರ್​ ರಿಷಭ್​ ಪಂತ್​ ಬ್ಯಾಟಿಂಗ್ ರ‍್ಯಾಂಕಿಂಗ್​ನಲ್ಲಿ 3 ಸ್ಥಾನ ಕುಸಿದಿದ್ದು, 9ನೇ ಸ್ಥಾನಕ್ಕಿಳಿದಿದ್ದಾರೆ. ವಿರಾಟ್​ ಕೊಹ್ಲಿ 6 ಸ್ಥಾನ ಕುಸಿದು 20ನೇ ಸ್ಥಾನಕ್ಕಿಳಿದಿದ್ದಾರೆ. ನಾಯಕ ರೋಹಿತ್​ ಶರ್ಮ 5 ಸ್ಥಾನ ಕುಸಿತದೊಂದಿಗೆ 31ನೇ ಸ್ಥಾನಕ್ಕಿಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net