ಇಂಗ್ಲೆಂಡ್​ ವಿರುದ್ಧ ವೆಸ್ಟ್​ ಇಂಡೀಸ್​ ಮೇಲುಗೈ

22
Published on

ಸೌಥಾಂಪ್ಟನ್​: ಏಕದಿನ ಕ್ರಿಕೆಟ್​ ವಿಶ್ವ ಚಾಂಪಿಯನ್​ ಇಂಗ್ಲೆಂಡ್​ ತಂಡಕ್ಕೆ ಟಿ20 ವಿಶ್ವ ಚಾಂಪಿಯನ್​ ವೆಸ್ಟ್​ ಇಂಡೀಸ್​ ತಂಡ ತವರು ನೆಲದ ಟೆಸ್ಟ್​ ಪಂದ್ಯದಲ್ಲಿ ದಿಟ್ಟ ಉತ್ತರ ನೀಡಿದೆ. ಆತಿಥೇಯರನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ ಬಳಿಕ ಎಚ್ಚರಿಕೆಯ ಬ್ಯಾಟಿಂಗ್​ ಪ್ರದಶಿರ್ಸಿರುವ ಕೆರಿಬಿಯನ್​ ತಂಡ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿ ಮೇಲುಗೈ ಕಂಡಿದೆ.

ಶುಕ್ರವಾರ 1 ವಿಕೆಟ್​ಗೆ 57 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ವೆಸ್ಟ್​ ಇಂಡೀಸ್​ ತಂಡ ಆರಂಭಿಕ ಕ್ರೇಗ್​ ಬ್ರಾಥ್​ವೇಟ್​ (65) ಅರ್ಧಶತಕದ ನೆರವಿನಿಂದ ಚಹಾ ವಿರಾಮದ ವೇಳೆಗೆ 5 ವಿಕೆಟ್​ಗೆ 235 ರನ್​ ಗಳಿಸಿದೆ. ವಿಂಡೀಸ್​ ತಂಡ 31 ರನ್​ ಮುನ್ನಡೆ ಸಾಧಿಸಿದೆ. ರೋಸ್ಟನ್​ ಚೇಸ್​ (27) ಮತ್ತು ಡೋವ್ರಿಚ್​ (30) ಮುರಿಯದ 6ನೇ ವಿಕೆಟ್​ಗೆ 49 ರನ್​ ಸೇರಿಸಿ ಕ್ರೀಸ್​ನಲ್ಲಿದ್ದಾರೆ. ಕರೊನಾ ಭೀತಿಯ ನಡುವೆ ಜೈವಿಕ&ಸುರಾ ವಾತಾವರಣದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿಲ್ಲ. ಪ್ರೇಕ್ಷಕರಿಲ್ಲದೆ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯವೂ ಇದಾಗಿದೆ.

ಆರ್ಚರ್​ಗೆ ನಿರಾಸೆ

ಇಂಗ್ಲೆಂಡ್​ ಪರ ಆಡುತ್ತಿರುವ ವೆಸ್ಟ್​ ಇಂಡೀಸ್​ ಮೂಲದ ವೇಗಿ ಜೋಫ್ರಾ ಆರ್ಚರ್​, ತವರು ತಂಡದ ವಿರುದ್ಧ ಚೊಚ್ಚಲ ವಿಕೆಟ್​ ಪಡೆಯುವ ಯತ್ನದಲ್ಲಿ ಎಡವಿದರು. ಶೈ ಹೋಪ್​ ವಿರುದ್ಧ ಎಲ್​ಬಿಡಬ್ಲ್ಯು ಮನವಿ ಸಲ್ಲಿಸಿದ ಸಮಯದಲ್ಲಿ ಅಂಪೈರ್​ ಪುರಸ್ಕರಿಸಿದ್ದರು. ಆದರೆ ಶೈ ಹೋಪ್​ ಡಿಆರ್​ಎಸ್​ ಮೊರೆ ಹೋದ ಸಮಯದಲ್ಲಿ ನೋಬಾಲ್​ ಎಸೆದಿದ್ದು ಸ್ಪಷ್ಟವಾಗಿತ್ತು. ಇದರಿಂದ ಆರ್ಚರ್​ ಇನಿಂಗ್ಸ್​ನ 12 ಓವರ್​ಗಳಲ್ಲಿ ವಿಕೆಟ್​ ಸಿಗದೆ ನಿರಾಸೆ ಅನುಭವಿಸಿದರು. ಆರ್ಚರ್​ರನ್ನು ಆಡಿಸುವ ಸಲುವಾಗಿ ಇಂಗ್ಲೆಂಡ್​ ಅನುಭವಿ ವೇಗಿ ಸ್ಟುವರ್ಟ್​ ಬ್ರಾಡ್​ರನ್ನು ತಂಡದಿಂದ ಹೊರಗಿಟ್ಟಿದೆ.

ಇಂಗ್ಲೆಂಡ್​ ಪ್ರಥಮ ಇನಿಂಗ್ಸ್​: 204, ವೆಸ್ಟ್​ ಇಂಡೀಸ್​ ಪ್ರಥಮ ಇನಿಂಗ್ಸ್​: 80 ಓವರ್​ಗಳಲ್ಲಿ 5 ವಿಕೆಟ್​ಗೆ 235 (ಕ್ರೇಗ್​ ಬ್ರಾಥ್​ವೇಟ್​ 65, ಕ್ಯಾಂಪ್​ಬೆಲ್​ 28, ಶೈ ಹೋಪ್​ 16, ಬ್ರೂಕ್ಸ್​ 39, ರೋಸ್ಟನ್​ ಚೇಸ್​ 27*, ಬ್ಲ್ಯಾಕ್​ವುಡ್​ 12, ಡೋವ್ರಿಚ್​ 30*, ಆಂಡರ್​ಸನ್​ 42ಕ್ಕೆ 2, ಸ್ಟೋಕ್ಸ್​ 24ಕ್ಕೆ 1, ಬೆಸ್​ 51ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net