ಭಾರತಕ್ಕೆ ಹೀನಾಯ ಸೋಲು…ಇಂಗ್ಲೆಂಡ್​ಗೆ 10 ವಿಕೆಟ್​ ಜಯ; ಫೈನಲ್​ನಲ್ಲಿ ಪಾಕಿಸ್ತಾನ ಎದುರಾಳಿ

ENG
Published on

ಅಡಿಲೇಡ್​: ಭಾರತ - ಇಂಗ್ಲೆಂಡ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ, ಹತ್ತು ವಿಕೆಟ್​​ಗಳ ಅಂತರದಿಂದ ಇಂಗ್ಲೆಂಡ್ ಜಯ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದೆ.

169 ರನ್​ಗಳ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಕ್ರಿಸ್ ಕಚ್ಚಿ ನಿಂತ ಅಲೆಕ್ಸ್​ ಹೇಲ್ಸ್​​ ಮತ್ತು ಜೋಸ್ ಬಟ್ಲರ್ ಭಾರತ ಬೌಲರ್​ಗಳನ್ನು ಬೆಂಡೆತ್ತಿದ್ದರು. ಎಂತಹ ಪ್ರಯತ್ನ ಪಟ್ಟರೂ ಕೂಡ ಈ ಜೋಡಿಯನ್ನು ಮಾತ್ರ ಭಾರತೀಯ ಬೌಲರ್​ಗಳಿಗೆ ಬೇರ್ಪಡಿಸಲು ಸಾಧ್ಯವಾಗಿಲ್ಲ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಧಾನಗತಿಯ ಆರಂಭವನ್ನು ಕಂಡಿತು. ಉಪನಾಯಕ ಕೆಎಲ್ ರಾಹುಲ್ ಮತ್ತೊಮ್ಮೆ ಒಂದಂಕಿ ರನ್​ಗಳಿಸಿ ಔಟ್ ಆದರು. ಇತ್ತ ನಾಯಕ ರೋಹಿತ್ ಶರ್ಮಾ ನಿಧಾನಗತಿಯ ಆಟಕ್ಕೆ ಮುಂದಾದರು. 28 ಎಸೆತ ಎದುರಿಸಿ ಕೇವಲ 27 ರನ್​ಗಳಿಸಿ ತಂಡದ ಒತ್ತಡಕ್ಕೆ ಕಾರಣರಾದರು. ಇದಾಗಿಯೂ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯಾ ಅರ್ಧಶತಕದ ಕಾರಣದಿಂದ ಭಾರತ 168 ರನ್​ ಗಳಿಸಲು ಶಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net