4ನೇ ಟೆಸ್ಟ್​ನ 2ನೇ ದಿನದಾಟ! 14 ಓವರ್​ಗಳಲ್ಲಿ 77 ರನ್​ ಬಾರಿಸಿದ ಆಂಗ್ಲರು | IND vs ENG ​

ವಿಜಯವಾಣಿ (64)
Published on

IND vs ENG: ಪ್ರಸ್ತುತ ಮ್ಯಾಂಚೆಸ್ಟರ್​ ಅಂಗಳದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ನಾಲ್ಕನೇ ಟೆಸ್ಟ್‌ 2ನೇ ದಿನದಂದು ಆಂಗ್ಲರ ಆರ್ಭಟ ಜೋರಾಗಿದೆ. 358ಕ್ಕೆ ಆಲ್​ಔಟ್ ಆದ ಟೀಮ್ ಇಂಡಿಯಾ, ಈ ಸಾಧಾರಣ ಮೊತ್ತವನ್ನು ಕಲೆಹಾಕುವಂತೆ ಬೆನ್​ ಸ್ಟೋಕ್ಸ್​ ಪಡೆಗೆ ಸವಾಲು ಹಾಕಿತು. ಅಂತೆಯೇ ಅಬ್ಬರಿಸಲು ಪ್ರಾರಂಭಿಸಿದ ಇಂಗ್ಲೆಂಡ್ ಆರಂಭಿಕರಾದ ಜ್ಯಾಕ್​ ಕ್ರಾಲಿ ಮತ್ತು ಬೆನ್​ ಡಕ್ಕೆಟ್​, ಕೇವಲ 14 ಓವರ್​ಗಳಲ್ಲೇ 77* ರನ್ ಬಾರಿಸಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಟೀಮ್ ಇಂಡಿಯಾ ಪರ ಕಣಕ್ಕಿಳಿದ ಉಪನಾಯಕ ರಿಷಭ್ ಪಂತ್​, ನೋವಿನಲ್ಲೇ ಉತ್ತಮ ಇನ್ನಿಂಗ್ಸ್​ ನೀಡಿದರು. ಯಶಸ್ವಿ ಜೈಸ್ವಾಲ್​ (58 ರನ್​) ಮತ್ತು ಪಂತ್​ ಆಕರ್ಷಕ ಅರ್ಧಶತಕ (54 ರನ್​, 74 ಎಸೆತ) ತಂಡದ ಒಟ್ಟು ಮೊತ್ತವನ್ನು 300ರ ಗಡಿದಾಟಿಸಲು ಸಹಾಯ ಮಾಡಿತು. 2ನೇ ದಿನದಾಟದಲ್ಲಿ ಇನ್ನೂ ಒಂದಷ್ಟು ಸಮಯ ಬಾಕಿ ಉಳಿದಿರುವಾಗಲೇ 358ಕ್ಕೆ ಆಲ್​ಔಟ್ ಆದ ಟೀಮ್ ಇಂಡಿಯಾ, ತಾವು ನೀಡಿದ ಗುರಿಯನ್ನು ಬೆನ್ನತ್ತಿದ ಆಂಗ್ಲರಿಗೆ ಸವಾಲು ತಲುಪದಂತೆ ಕಟ್ಟಿಹಾಕಲು ಎಡವಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net