

ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ದಾಳಿಗೆ ತತ್ತರಿಸಿರುವ ಪ್ರವಾಸಿ ವೆಸ್ಟ್ ಇಂಡೀಸ್ ತಂಡ, ಕ್ರೇಗ್ ಬ್ರಾಥ್‌ವೇಟ್ (75ರನ್, 165 ಎಸೆತ, 8 ಬೌಂಡರಿ) ಹಾಗೂ ಶಮರಾಹ್ ಬ್ರೂಕ್ಸ್ (60*, 115 ಎಸೆತ, 10 ಬೌಂಡರಿ) ಪ್ರತಿಹೋರಾಟದ ನಡುವೆಯೂ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಫಾಲೋ ಆನ್ ತಪ್ಪಿಸಿಕೊಳ್ಳಲು ಹೋರಾಡುತ್ತಿದೆ. ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ ಮಳೆಯಿಂದಾಗಿ ಶನಿವಾರದ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. 1 ವಿಕೆಟ್‌ಗೆ 32 ರನ್‌ಗಳಿಂದ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ, ನಾಲ್ಕನೇ ದಿನದಾಟದ ಚಹಾ ವಿರಾಮದ ವೇಳೆಗೆ 76 ಓವರ್ ಗಳಲ್ಲಿ 4 ವಿಕೆಟ್‌ಗೆ 227 ರನ್ ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 242 ರನ್ ಗಳಿಸಬೇಕಿದೆ.ಫಾಲೋಆನ್ ತಪ್ಪಿಸಿಕೊಳ್ಳಲು ಇನ್ನು 42 ರನ್ ಗಳಿಸಬೇಕಿದೆ. ಏಕದಿನ ವಿಶ್ವ ಚಾಂಪಿಯನ್ ಇಂಗ್ಲೆಂಡ್ 9 ವಿಕೆಟ್‌ಗೆ 469 ರನ್‌ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಇಂಗ್ಲೆಂಡ್: 162 ಓವರ್‌ಗಳಲ್ಲಿ 9 ವಿಕೆಟ್‌ಗೆ 469 ಡಿಕ್ಲೇರ್, ವೆಸ್ಟ್ ಇಂಡೀಸ್: ನಾಲ್ಕನೇ ದಿನದಾಟದ ಚಹಾ ವಿರಾಮದ ವೇಳೆಗೆ 76 ಓವರ್‌ಗಳಲ್ಲಿ 4 ವಿಕೆಟ್‌ಗೆ 227 (ಬ್ರಾಥ್ ವೇಟ್ 75, ಹೋಪ್ 25, ಅಲ್ಜಾರಿ ಜೋಸೆಫ್ 32, ಬ್ರೂಕ್ಸ್ 60*, ಕರ್ರನ್ 35ಕ್ಕೆ 2, ಬೆಸ್ 59ಕ್ಕೆ 1, ಸ್ಟೋಕ್ಸ್ 22ಕ್ಕೆ 1).