ಕೋವಿಡ್-19ರಿಂದ ಗುಣಮುಖರಾಗುವಂತೆ ಹಾರೈಸಿ ಐಶ್ವರ್ಯ ರೈ ಫೋಟೋ ಶೇರ್ ಮಾಡಿದ ಡಬ್ಲ್ಯುಡಬ್ಲ್ಯುಇ ದಿಗ್ಗಜ

jan sena and rai for web
Published on

ಬೆಂಗಳೂರು: ಡಬ್ಲ್ಯುಡಬ್ಲ್ಯುಇ ದಿಗ್ಗಜ ಹಾಗೂ ಹಾಲಿವುಡ್ ನಟ ಜಾನ್ ಸೆನಾಗೂ ಬಾಲಿವುಡ್‌ಗೂ ಎಲ್ಲಿದ ನಂಟು. ಅಮಿತಾಭ್ ಬಚ್ಚನ್ ಕೋವಿಡ್-19ಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರಿದಾಗ ಬೇಗ ಸುಧಾರಿಸಿಕೊಳ್ಳುವಂತೆ ಹಾರೈಸಿ ಬಿಗ್ ಬಿ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಶೇರ್ ಮಾಡಿದ್ದ ಜಾನ್ ಸೆನಾ, ಇದೀಗ ಐಶ್ವರ್ಯ ರೈ ಫೋಟೋವನ್ನು ಶೇರ್ ಮಾಡಿದ್ದಾರೆ. ಕರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಐಶ್ವರ್ಯ ರೈ ಶನಿವಾರ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾರದ ಹಿಂದೆಯೇ ಐಶ್ವರ್ಯ ರೈಗೆ ಕರೊನಾ ಸೋಂಕು ದೃಢಪಟ್ಟಿದ್ದರೂ ಶುಕ್ರವಾರದವರೆಗೂ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದರು.

ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್‌ಗೆ ಕೋವಿಡ್-19ರ ದೃಢಪಟ್ಟ ಬೆನ್ನಲ್ಲೇ ಇನ್‌ಸ್ಟಾದಲ್ಲಿ ಅಪ್ಪ-ಮಗನ ಫೋಟೋ ಪ್ರಕಟಿಸಿ ಬೇಗ ಸುಧಾರಿಸಿಕೊಳ್ಳುವಂತೆ ಹಾರೈಸಿದ್ದರು. ಬಿಗ್ ಬಿ ಕುಟುಂಬದಲ್ಲಿ ಪತ್ನಿ ಜಯಾ ಬಚ್ಚನ್ ಹೊರತುಪಡಿಸಿ, ಮಗ, ಸೊಸೆ ಹಾಗು ಮೊಮ್ಮಗಳಿಗೂ ಕರೊನಾ ವೈರಸ್ ಕಾಣಿಸಿಕೊಂಡಿದೆ.  ವಿದೇಶದಿಂದಲ್ಲೂ ಬಚ್ಚನ್ ಕುಟುಂಬ ಸುಧಾರಿಸಿಕೊಳ್ಳುವಂತೆ ಹಾರೈಕೆಗಳು ಬರುತ್ತಿವೆ.

ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಜಾನ್ ಸೆನಾ, ಇದಕ್ಕೂ ಮೊದಲು ನಿಧನರಾದ ಸುಶಾಂತ್ ಸಿಂಗ್ ರಜಪೂತ್, ಇರ್ಫಾನ್ ಖಾನ್ ರಿಷಿ ಕಪೂರ್ ಫೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಪ್ರಕಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net